alex Certify BREAKING NEWS: ರಮೇಶ್ ಜಾರಕಿಹೊಳಿಗೆ ಶಾಕ್, ಸಿಡಿ ಪ್ರಕರಣದ ಮರು ತನಿಖೆ ಕೋರಿ ಅರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ರಮೇಶ್ ಜಾರಕಿಹೊಳಿಗೆ ಶಾಕ್, ಸಿಡಿ ಪ್ರಕರಣದ ಮರು ತನಿಖೆ ಕೋರಿ ಅರ್ಜಿ

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರೊಟೆಸ್ಟ್ ಅರ್ಜಿ ಸಲ್ಲಿಸಲಾಗಿದೆ.

ಸಂತ್ರಸ್ತೆ ಪರ ವಕೀಲರಿಂದ ಪ್ರೊಟೆಸ್ಟ್ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದ ಮರು ತನಿಖೆ ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ. 10 ಅಂಶಗಳ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಜಾರಕಿಹೊಳಿ ಅವರನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ. ಎಸ್ಐಟಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಆರೋಪಿ ಬಂಧಿಸಲು ಅವಕಾಶವಿದ್ದರೂ ಬಂಧಿಸಿಲ್ಲ. ಸಂತ್ರಸ್ತೆ ಹೇಳಿಕೆಯನ್ನು ಸಮರ್ಪಕವಾಗಿ ದಾಖಲಿಸಿಕೊಂಡಿಲ್ಲ. ಪ್ರಕರಣದ ಮಹಜರು ಪ್ರಕ್ರಿಯೆಯನ್ನು ಸರಿಯಾಗಿ ನಡೆಸಿಲ್ಲ ಎಂದು ದೂರಲಾಗಿದೆ.

ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕುವಲ್ಲಿ, ಸಂಗ್ರಹಿಸುವಲ್ಲಿ ಲೋಪವಾಗಿದೆ. ವಿಡಿಯೋಗೆ ಸಂಬಂಧಿಸಿದಂತೆ ಅದರಲ್ಲಿರುವವರ ಸಮರ್ಪಕ ವಿಚಾರಣೆ ನಡೆಸಿ ಸರಿಯಾಗಿ ಹೇಳಿಕೆ ದಾಖಲಿಸಿಲ್ಲ. ಸೌಮೇಂದು ಮುಖರ್ಜಿ ನಿಲುವು ಸಹ ಭಿನ್ನವಾಗಿತ್ತು ಎನ್ನಲಾಗಿದ್ದು, ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಸಂತ್ರಸ್ತೆ ಪರ ವಕೀಲರಿಂದ ಕೋರ್ಟ್ ಗೆ ಪ್ರೊಟೆಸ್ಟ್ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...