alex Certify SHOCKING NEWS: ರಸ್ತೆಗೆ 10 ರೂಪಾಯಿ ಬಿಸಾಕಿ 1 ಲಕ್ಷ ಹಣ ಎಗರಿಸಿ ಎಸ್ಕೇಪ್ ಆದ ದುಷ್ಕರ್ಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ರಸ್ತೆಗೆ 10 ರೂಪಾಯಿ ಬಿಸಾಕಿ 1 ಲಕ್ಷ ಹಣ ಎಗರಿಸಿ ಎಸ್ಕೇಪ್ ಆದ ದುಷ್ಕರ್ಮಿ

ರಾಮನಗರ: ದುಷ್ಕರ್ಮಿಯೊಬ್ಬ ರಸ್ತೆಗೆ 10 ರೂಪಾಯಿ ನೋಟು ಬಿಸಾಕಿ ಹಣ ಬಿದ್ದಿದೆ ಎಂದು ಹೇಳಿ ವ್ಯಕ್ತಿ ಬಳಿ ಇದ್ದ 1 ಲಕ್ಷ ರೂಪಾಯಿ ಹಣ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ನಡೆದಿದೆ.

ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡವರು. ರಾಘವೇಂದ್ರ ಕೆನರಾ ಬ್ಯಾಂಕ್ ನಿಂದ 1 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು ಆಗತಾನೇ ಬ್ಯಾಂಕ್ ನಿಂದ ಹೊರ ಬರುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಕಳ್ಳ, ರಸ್ತೆಗೆ 10 ರೂಪಾಯಿ ನೋಟು ಬಿಸಾಕಿ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದ್ದಾನೆ.

ರಾಘವೇಂದ್ರ ಅವರು 1 ಲಕ್ಷ ರೂಪಾಯಿ ಹಣದ ಬ್ಯಾಗ್ ನ್ನು ಬೈಕ್ ಮೇಲೆ ಇಟ್ಟು 10 ರೂಪಾಯಿ ಎತ್ತಿಕೊಳ್ಳು ಹೋಗಿದ್ದಾರೆ. ಕಳ್ಳ ಕ್ಷಣಾರ್ಧದಲ್ಲಿ 1 ಲಕ್ಷ ರೂಪಾಯಿ ಹಣದ ಬ್ಯಾಗ್ ಎಗರಿಸಿ ಎಸ್ಕೇಪ್ ಆಗಿದ್ದಾನೆ. ರಾಘವೇಂದ್ರ ಅವರಿಗೆ ಯಾರೋ ನಿಮ್ಮ ಬ್ಯಾಗ್ ಕದ್ದೊಯ್ಯುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಎಚ್ಚರಿಸಿದರೂ ಅವರಿಗೆ ಅರ್ಥವಾಗಿಲ್ಲ. ಕಳ್ಳನ ಕೈಚಳಕ ಬ್ಯಾಂಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...