
ಮಂಗಳೂರು: ಕೇರಳದ ಪೊನ್ನಾನಿ, ಕಡಲುಂಡಿಯಲ್ಲಿ ಪವಿತ್ರ ರಂಜನ್ ಮಾಸದ ಚಂದ್ರ ದರ್ಶನವಾಗಿದೆ ಈ ಹಿನ್ನೆಲೆಯಲ್ಲಿ ಮಾರ್ಚ್ 2ರ ಭಾನುವಾರದಿಂದ ರಂಜಾನ್ ಉಪವಾಸ ಪ್ರಾರಂಭವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಳ್ಳಾಲ ಖಾಝಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ನಾಳೆಯಿಂದ ರಂಜಾನ್ ಉಪವಾಸ ಆರಂಭವಾಗಲಿದೆ ಎಂದು ಘೋಷಣೆ ಮಾಡಿದ್ದಾರೆ.
ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ಅರ್ಧ ಚಂದ್ರನ ದರ್ಶನದೊಂದಿಗೆ ರಂಜಾನ್ ಅಧಿಕೃತವಾಗಿ ಪ್ರಾರಂಭವಾಗುತ್ತದೆ. ಶುಕ್ರವಾರ ಚಂದ್ರನು ಗೋಚರಿಸದ ಕಾರಣ, ಪವಿತ್ರ ತಿಂಗಳು ಶನಿವಾರ ಸಂಜೆ ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗಿದ್ದು, ಭಾನುವಾರದಿಂದ ಉಪವಾಸ ಆರಂಭವಾಗಲಿದೆ. ಮಾ. 31ರಂದು ರಂಜಾನ್ ಹಬ್ಬ ಆಚರಿಸಲಾಗುವುದು.