alex Certify ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದಿಂದ ಗ್ರಾನೈಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದಿಂದ ಗ್ರಾನೈಟ್​..!

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಅಡಿಪಾಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ರೋಲರ್​ ಕಾಂಪ್ಯಾಕ್ಟ್​ ಕಾಂಕ್ರೀಟ್​​ನ ಕೊನೆಯ ಹಾಗೂ 48ನೇ ಪದರವನ್ನು ತುಂಬಲಾಗಿದೆ ಎಂದು ರಾಮಮಂದಿರ ಟ್ರಸ್ಟ್​​ ಮಾಹಿತಿ ನೀಡಿದೆ.

ಅಡಿಪಾಯ ನಿರ್ಮಾಣ ಕಾರ್ಯದ ಮೊದಲ ಹಂತ ಪೂರ್ಣಗೊಂಡಿದೆ. ಕಲ್ಲುಗಳಿಂದ ಕೂಡಿದ ಇನ್ನೊಂದು ಪದರವನ್ನು ನಿರ್ಮಿಸುತ್ತೇವೆ. ಕರ್ನಾಟಕದ ಗ್ರಾನೈಟ್​ ಹಾಗೂ ಮಿರ್ಜಾಪುರದ ಮರಳುಗಲ್ಲು ಕಾಂಕ್ರೀಟ್​ ಬೇಸ್ ಮೇಲೆ ಇರಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರೈ ಹೇಳಿದ್ರು.

ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್​ 5ರಂದು ರಾಮಮಂದಿರಕ್ಕೆ ಅಡಿಗಲ್ಲನ್ನು ಹಾಕಿದ್ದರು. ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು 2023ರ ಡಿಸೆಂಬರ್​ ತಿಂಗಳಲ್ಲಿ ಭಕ್ತರ ದರ್ಶನಕ್ಕೆ ದೇಗುಲವನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ. 110 ಎಕರೆ ಜಾಗದಲ್ಲಿ 900 ರಿಂದ 1000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ದೇವಾಲಯ ಸಂಕೀರ್ಣ ತಲೆಎತ್ತಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...