alex Certify ಇನಾಯಾ ಜೊತೆಗೆ ಮತ್ತೊಂದು ಡಾನ್ಸ್‌ ವಿಡಿಯೋದಲ್ಲಿ ವೈರಲ್ ಆದ ರಾಮ್ ಗೋಪಾಲ್ ವರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನಾಯಾ ಜೊತೆಗೆ ಮತ್ತೊಂದು ಡಾನ್ಸ್‌ ವಿಡಿಯೋದಲ್ಲಿ ವೈರಲ್ ಆದ ರಾಮ್ ಗೋಪಾಲ್ ವರ್ಮಾ

ಖುಲ್ಲಂಖುಲ್ಲಾ ಮಾತಾಡೋದ್ರಲ್ಲಿ ಎತ್ತಿದ ಕೈ ಆಗಿರುವ ರಾಮ್ ಗೋಪಾಲ್ ವರ್ಮಾ ನಟಿಯೊಬ್ಬರ ಜೊತೆಗೆ ವಿಚಿತ್ರವಾಗಿ ಸ್ಟೆಪ್ ಹಾಕುತ್ತಿರುವ ವಿವಾದಾತ್ಮಕ ವಿಡಿಯೋ ವೈರಲ್ ಆದ ಬಳಿಕ ಇದೀಗ ಇನಾಯಾ ಸುಲ್ತಾನಾ ಜೊತೆಗೆ ರಂಗೀಲಾ ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದರ ಮೂಲಕ ಅದೇ ರೀತಿ ಮತ್ತೊಮ್ಮೆ ಸುದ್ದಿ ಮಾಡುತ್ತಿದ್ದಾರೆ.

ಇನಾಯಾ ಸುಲ್ತಾನಾ ಜೊತೆಗೆ ಡ್ಯಾನ್ಸ್ ಮಾಡುವಾಗ ವಿಚಿತ್ರವಾಗಿ ವರ್ತಿಸಿದರೆಂದು ಟೀಕೆಗೆ ಗ್ರಾಸವಾಗಿದ್ದ ವರ್ಮಾ, ಇದಕ್ಕೆ ಸ್ಪಷ್ಟನೆ ಕೊಟ್ಟು, “ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಹಾಗೂ ಕೆಂಪು ಬಟ್ಟೆಯಲ್ಲಿರುವ ಹುಡುಗಿ ಇನಾಯಾ ಸುಲ್ತಾನಾ ಎಂದು ನಾನು ಅಮೆರಿಕ ಅರ್ಧಯಕ್ಷ ಜೋ ಬಿಡೆನ್ ಮೇಲೆ ಪ್ರಮಾಣ ಮಾಡಿ ಇನ್ನೊಮ್ಮೆ ಸ್ಪಷ್ಟಪಡಿಸುತ್ತೇನೆ,” ಎಂದು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ ಇನಾಯಾ ಜೊತೆಗೆ ಡ್ಯಾನ್ಸ್ ಮಾಡುತ್ತಾ, “ಸುಂದರಿ ಇನಾಯಾ ಸುಲ್ತಾನಾ ನನ್ನ ನೃತ್ಯ ಸಂಗಾತಿಯಾಗಿ,” ಎಂದು ಕ್ಯಾಪ್ಷನ್ ಕೊಟ್ಟು ಆ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ಇನಾಯಾ ಸುಲ್ತಾನಾರದ್ದು ಎಂದು ಹೇಳಲಾದ ಪ್ರೊಫೈಲ್ ಒಂದರಲ್ಲಿ, “ನನ್ನ ಹಾಗೂ ರಾಮ್ ಗೋಪಾಲ್ ವರ್ಮಾರ ಈ ವಿಡಿಯೋವನ್ನು ಅಧಿಕೃತವಾಗಿ ಶೇರ್‌ ಮಾಡುತ್ತಿದ್ದೇನೆ,” ಎಂದು ವಿವಾದಾತ್ಮಕ ಡ್ಯಾನ್ಸ್‌ನ ವಿಡಿಯೋ ಪೋಸ್ಟ್ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...