alex Certify ಅಕ್ಷಯ್‌ ಕುಮಾರ್‌ ನಟನೆಯ ‘ರಕ್ಷಾ ಬಂಧನ್‘‌ ಚಿತ್ರದ ಟ್ರೇಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಷಯ್‌ ಕುಮಾರ್‌ ನಟನೆಯ ‘ರಕ್ಷಾ ಬಂಧನ್‘‌ ಚಿತ್ರದ ಟ್ರೇಲರ್ ರಿಲೀಸ್

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನೆಮಾ ‘ರಕ್ಷಾ ಬಂಧನ್’ ಟ್ರೇಲರ್ ರಿಲೀಸ್ ಆಗಿದೆ. ಇದು ಅಣ್ಣ ಮತ್ತು ತಂಗಿಯರ ನಡುವಿನ ಬಾಂಧವ್ಯದ ಕಥಾವಸ್ತುವನ್ನ ಹೊಂದಿರುವ ಸಿನೆಮಾ. ‌‘ಪೃಥ್ವಿರಾಜ್ ಚೌಹಾಣ್‘ ನಂತರ ಬರಲಿರೋ ಸಿನೆಮಾ ಇದಾಗಿದೆ. ಅಗಸ್ಟ್ 11ರಂದು ರಕ್ಷಾ ಬಂಧನ ದಿನದಂದು ಅಭಿಮಾನಿಗಳಿಗಳಿಗೆ ರಂಜಿಸಲು ಬರುತ್ತಿರೋ ಫ್ಯಾಮಿಲಿ ಡ್ರಾಮಾ ಸಿನೆಮಾ ಇದಾಗಿದೆ.

ಅಪ್ಪ-ಅಮ್ಮ ಇಲ್ಲದ ಪುಟ್ಟ ಕುಟುಂಬ ಅದು, ಅಣ್ಣನಿಗೆ ನಾಲ್ಕು ಜನ ತಂಗಿಯರೇ ಸರ್ವಸ್ವ. ತಂಗಿಯರಿಗೂ ಅಣ್ಣನೆ ಸೂಪರ್‌ ಹಿರೋ. ಒಂದು ಪುಟ್ಟ ಅಂಗಡಿಯನ್ನ ನಡೆಸುತ್ತ ತಂಗಿಯರ ಮದುವೆ ಮಾಡಲು ಹೊರಟವನಿಗೆ ಎದುರಾಗೋ ಸವಾಲು ಏನೇನು ? ತಂಗಿಯ ಜವಾಬ್ದಾರಿ ಹೊತ್ತ ಒಬ್ಬ ಅಣ್ಣ ತನ್ನ ಆಸೆ ಆಕಾಂಕ್ಷೆಗಳನ್ನ ಹೇಗೆ ಬದಿಗೊತ್ತುತ್ತಾನೆ. ಇನ್ನು ಸಮಾಜದಲ್ಲಿ ಬೇರೂರಿರುವ ವರದಕ್ಷಿಣೆ ಪಿಡುಗಿನ ನಡುವೆ ಅಣ್ಣನಾದವನು ಹೇಗ್ಹೇಗೆ ಸಮಸ್ಯೆಗಳನ್ನು ಎದುರಿಸಿ ನಿಲ್ಲುತ್ತಾನೆ ಅನ್ನೋದು ಸಿನೆಮಾದ ಕಥಾವಸ್ತುವಾಗಿದೆ.

ಅಗಸ್ಟ್ 11 ರಂದು ರಿಲೀಸ್ ಆಗಲಿರೋ ಈ ಸಿನೆಮಾದಲ್ಲಿ ನಟ ಅಕ್ಷಯ್‌ ಕುಮಾರ್ ಗೆ ನಟಿ ಭೂಮಿ ಫೆಡ್ನೆಕರ್ ಸಾಥ್ ಕೊಡಲಿದ್ದಾರೆ. ಈ ಜೋಡಿ ಈ ಹಿಂದೆ ʼಟಾಯ್ಲಟ್ ಏಕ್ ಪ್ರೇಮ್‌ ಕಥಾʼ ಅನ್ನೊ ಸೂಪರ್‌ಡೂಪರ್‌ ಹಿಟ್ ಸಿಮೆಮಾ ಕೊಟ್ಟಿತ್ತು. ಇನ್ನೂ ಇದೇ ದಿನದಂದು ನಟ ಅಮೀರ್‌ಖಾನ್‌ ಹಾಗೂ ನಟಿ ಕರೀನಾ ಕಪೂರ್ ಖಾನ್ ನಟಿಸಿರುವ ‘ಲಾಲ್ ಸಿಂಗ್ ಚಡ್ಡಾ‘ ಸಿನೆಮಾ ಕೂಡಾ ರಿಲೀಸ್ ಆಗಲಿದೆ.

ಅಮೀರ್‌ಖಾನ್‌ ಈ ಸಿನೆಮಾ ಏಪ್ರಿಲ್ 14‌ ರಂದು ರಿಲೀಸ್ ಮಾಡುವುದಾಗಿ ಹೇಳಿದ್ದರು, ಆದರೆ ಕಾರಣಾಂತರದಿಂದ ಈ ಸಿನೆಮಾ ಕೂಡಾ ಅಗಸ್ಟ್ 11 ಕ್ಕೆ ತೆರೆಗೆ ಬರಲಿದೆ. ಈಗ ಈ ಎರಡು ಸಿನೆಮಾ ಒಂದೇ ದಿನ ಬಿಡುಗಡೆಯಾಗಲಿದ್ದು, ಯಾವ ಸಿನೆಮಾ ಅಭಿಮಾನಿಗಳಿಂದ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೆ ಅನ್ನೋದು ಕಾದು ನೋಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...