alex Certify ಇಂದು ದೇಶದೆಲ್ಲೆಡೆ ರಕ್ಷಾಬಂಧನ ಸಂಭ್ರಮ: ಯುಪಿಯ ಈ ಹಳ್ಳಿಗಳಲ್ಲಿ ಆಚರಿಸಲ್ಲ ಹಬ್ಬ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ದೇಶದೆಲ್ಲೆಡೆ ರಕ್ಷಾಬಂಧನ ಸಂಭ್ರಮ: ಯುಪಿಯ ಈ ಹಳ್ಳಿಗಳಲ್ಲಿ ಆಚರಿಸಲ್ಲ ಹಬ್ಬ…..!

ಲಕ್ನೋ: ಇಂದು ಇಡೀ ದೇಶವೇ ರಕ್ಷಾ ಬಂಧನದ ಸಂಭ್ರಮದಲ್ಲಿದೆ. ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗೆ ರಾಖಿ ಕಟ್ಟಿ ರಕ್ಷೆಯ ಅಭಯವನ್ನು ಬೇಡುತ್ತಾರೆ. ಆದರೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ 60 ಹಳ್ಳಿಗಳಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸುವುದಿಲ್ಲ.

ಹೌದು, ಸುಮಾರು ನಾಲ್ಕು ಶತಮಾನಗಳಿಂದ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುವ ಸಂಪ್ರದಾಯ ಈ ಹಳ್ಳಿಗಳಲ್ಲಿ ಇಲ್ಲ. ಸೋದರರ ಬದಲು ಮರದ ಕೋಲುಗಳಿಗೆ ರಾಖಿ ಕಟ್ಟುತ್ತಾರೆ. ಇಲ್ಲಿನ ಬಹುಪಾಲು ಜನರು ತಮ್ಮ ಶೌರ್ಯಕ್ಕೆ ಹೆಸರುವಾಸಿಯಾಗಿರುವ ರಾಜ ಮಹಾರಾಣಾ ಪ್ರತಾಪನ 17ನೇ ತಲೆಮಾರಿನವರು ಎಂದು ಹೇಳಿಕೊಳ್ಳುತ್ತಾರೆ. 1576ರ ಹಲ್ಡಿಘಾಟಿ ಯುದ್ಧದ ಸಮಯದಲ್ಲಿ ಪುರುಷರೆಲ್ಲರೂ ಯುದ್ಧಭೂಮಿಯಲ್ಲಿದ್ದರಿಂದ ಯಾರಿಗೂ ರಕ್ಷಾ ಬಂಧನ ಆಚರಿಸಲು ಸಾಧ್ಯವಾಗಿರಲಿಲ್ಲವಂತೆ.

ಹೊಸ ವಿಡಿಯೋದಲ್ಲಿ ಪಡ್ಡೆ ಹೈದನಾಗಿ ಮಿಂಚಿದ ಧೋನಿ

ಹೀಗಾಗಿ ಇಲ್ಲಿನ ಮಹಿಳೆಯರು ಮರದ ಕಡ್ಡಿಗಳಿಗೆ ರಾಖಿ ಕಟ್ಟಲು ನಿರ್ಧರಿಸಿದರು. ಅಂದಿನಿಂದ ಇಂದಿನವರೆಗೂ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಛಡಿ ಪೂಜೆ ಅಂತಲೂ ಕರೆಯಲಾಗುತ್ತದೆ.

ಇನ್ನು ಮೀರತ್ ನ ಸುರಾನಾ ಎಂಬ ಹಳ್ಳಿಯಲ್ಲಿ ಕೂಡ ಮಹಿಳೆಯರು ರಕ್ಷಾ ಬಂಧನ ಹಬ್ಬವನ್ನು ಆಚರಿಸುವುದಿಲ್ಲವಂತೆ. 12ನೇ ಶತಮಾನದ ಅಂತ್ಯದಲ್ಲಿ ಹಬ್ಬದ ದಿನದಂದೇ ಮಹಮ್ಮದ್ ಘೋರಿ ಈ ಹಳ್ಳಿಗೆ ದಾಳಿ ಮಾಡಿ ಇಲ್ಲಿನ ಅನೇಕ ಜನರನ್ನು ಕೊಂದು ಹಾಕಿದನಂತೆ. ನಂತರದ ದಿನಗಳಲ್ಲಿ ಹಬ್ಬ ಆಚರಿಸಲು ಪ್ರಯತ್ನಿಸಿದಾಗ ಈ ಹಳ್ಳಿಯ ಹುಡುಗನೊಬ್ಬ ಅಂಗವೈಕಲ್ಯಕ್ಕೆ ಗುರಿಯಾದನಂತೆ. ಅಂದಿನಿಂದ ಇದನ್ನು ಶಾಪವಾಗಿ ಪರಿಗಣಿಸಲಾಗಿದ್ದು, ಇಂದಿಗೂ ಈ ಹಳ್ಳಿಯಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸುವುದಿಲ್ಲ ಎಂದು ಹೇಳಲಾಗಿದೆ.

ಯುಪಿಯ ಸಂಭಾಲ್ ಜಿಲ್ಲೆಯಲ್ಲಿ ಕೂಡ ಈ ಹಬ್ಬವನ್ನು ಆಚರಿಸಲಾಗುವುದಿಲ್ಲ. ಯಾಕೆಂದರೆ ರಾಖಿ ಕಟ್ಟಿದ ಬಳಿಕ ಸಹೋದರಿಗೆ ಏನಾದರೊಂದು ಉಡುಗೊರೆ ನೀಡಬೇಕಾಗುತ್ತದೆ. ಒಂದು ವೇಳೆ ಸೋದರಿಯರು ಆಸ್ತಿಯಲ್ಲಿ ಪಾಲು ಕೇಳಿದರೆ ಏನು ಮಾಡುವುದು ಅನ್ನೋ ಭಯದಿಂದಾಗಿ ಈ ಹಬ್ಬವನ್ನೇ ಆಚರಿಸಲಾಗುತ್ತಿಲ್ಲ.

ಇನ್ನು ರಕ್ಷಾಬಂಧನ ದಿನದಂದು ಮಗು ಜನಿಸಿದರೆ ಶಾಪ ನಿವಾರಣೆಯಾಗುತ್ತದೆ ಅನ್ನೋ ನಂಬಿಕೆ ಕೂಡ ಇಲ್ಲಿನ ಗ್ರಾಮಸ್ಥರಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...