alex Certify ರಾಖಿ ಸಾವಂತ್ ಪ್ರಿಯತಮನಿಗಿದ್ದಾಳೆ ಗರ್ಲ್ ಫ್ರೆಂಡ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಖಿ ಸಾವಂತ್ ಪ್ರಿಯತಮನಿಗಿದ್ದಾಳೆ ಗರ್ಲ್ ಫ್ರೆಂಡ್…..!

ಕಳೆದ ಕೆಲವು ತಿಂಗಳಿಂದ ಬಾಲಿವುಡ್ ನಟಿ ರಾಖಿ ಸಾವಂತ್ ಹುಡುಕಿಕೊಂಡಿರುವ ಬಾಯ್ ಫ್ರೆಂಡ್ ಅದಿಲ್ ಖಾನ್ ಡುರಾನಿ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ಸಂತೋಷದಿಂದ ಇರುವ ಸಂದರ್ಭದಲ್ಲಿಯೇ ಮಹಿಳೆಯೊಬ್ಬಳು ರಾಖಿ ಸಾವಂತ್ ಗೆ ಭಾರೀ ಶಾಕ್ ನೀಡಿದ್ದಾರೆ.

ಅದೆಂದರೆ, ರೋಶಿನ ಎಂಬ ಮಹಿಳೆ ಅದಿಲ್ ನನ್ನ ಬಾಯ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾಳೆ. ರಾಖಿ ಸಾವಂತ್ ಅವರು ಅದಿಲ್ ನನ್ನು ಸಾರ್ವಜನಿಕವಾಗಿ ಪರಿಚಯ ಮಾಡಿಕೊಟ್ಟ ಬೆನ್ನ ಹಿಂದೆಯೇ ಈ ಮಹಿಳೆ ಅದಿಲ್ ತನ್ನ ಬಾಯ್ ಫ್ರೆಂಡ್ ಎಂದು ಹೇಳಿಕೊಳ್ಳುವ ಮೂಲಕ ಆತಂಕ ಉಂಟುಮಾಡಿದ್ದಾಳೆ.

ರಾಖಿ ಸಾವಂತ್ ಗೆ ಪದೇಪದೆ ಕರೆ ಮಾಡುವ ರೋಶಿನ ದೆಲಾವರಿ ಎಂಬ ಮಹಿಳೆ, ಅದಿಲ್ ನನ್ನ ಬಾಯ್ ಫ್ರೆಂಡ್. ನಾನು ಮೈಸೂರಿನವಳು ಎಂದು ಹೇಳಿಕೊಳ್ಳುತ್ತಿದ್ದಾಳಂತೆ.

ಅಂದಹಾಗೆ ಅದಿಲ್ ಸಹ ಮೈಸೂರು ಮೂಲದವರಾಗಿದ್ದಾರೆ. ನನಗೆ ಅದಿಲ್ ಕಳೆದ ನಾಲ್ಕು ವರ್ಷಗಳಿಂದ ಗೊತ್ತು. ಅದಿಲ್ ಜೊತೆಗೆ ನಾನು ಸಾಕಷ್ಟು ಸಮಯ ಕಳೆದಿದ್ದೇನೆ. ಈ ಹಿನ್ನೆಲೆಯಲ್ಲಿ ನೀವು ಅದಿಲ್ ನಿಂದ ದೂರ ಇರಿ ಎಂದು ಎಚ್ಚರಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...