ಜನ ಪ್ರತಿನಿಧಿಗಳಲ್ಲಿ ಅನನ್ಯ ವಿಷಯಗಳಲ್ಲಿ ಕಾಳಜಿ ಇರುತ್ತದೆ. ಇಲ್ಲೊಬ್ಬ ಸಂಸದರು 800 ವರ್ಷಗಳಷ್ಟು ಹಳೆಯದಾದ ಮೆಹಬೂಬ್ ನಗರ ಜಿಲ್ಲೆಯ ಪಿಲ್ಲಲರ್ಮರಿ ಎಂಬ ದೈತ್ಯ ಆಲದ ಮರವನ್ನು ಸಂರಕ್ಷಿಸಲು 2 ಕೋಟಿ ರೂ. ನೀಡಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ರಾಜ್ಯಸಭಾ ಸದಸ್ಯ ಜೋಗಿನಪಲ್ಲಿ ಸಂತೋಷ್ ಕುಮಾರ್ ಅವರು ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿಯಿಂದ ಈ ಹಣ ನೀಡಿ ಆ ಮರದ ಮಹತ್ವ ಸಾರಿದ್ದಾರೆ.
ಸೆಪ್ಟೆಂಬರ್ 12 ರಂದು ಅವರು ಈ ಪುರಾತನ ಮರ ಸ್ಥಳಕ್ಕೆ ಭೇಟಿ ನೀಡಿದ್ದು, ಅವರು ಮರವನ್ನು ಸಂರಕ್ಷಿಸಲು ರಾಜ್ಯ ಪ್ರವಾಸೋದ್ಯಮ ಸಚಿವ ವಿ ಶ್ರೀನಿವಾಸ್ ಗೌಡ, ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಮತ್ತು ಪ್ರವಾಸೋದ್ಯಮ ಅಧಿಕಾರಿಗಳು ಮಾಡಿದ ಪ್ರಯತ್ನವನ್ನು ಶ್ಲಾಘಿಸಿದರು. ಸಂತೋಷ್ ಅವರು ತಮ್ಮ ಭೇಟಿಯ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
“ಏಷ್ಯಾದ ಎರಡನೇ ಅತಿ ದೊಡ್ಡ ಮರವಾಗಿರುವ ಈ ಆಲದ ಮರದ ಸುತ್ತಲೂ ಇತರ ಚಟುವಟಿಕೆಗಳನ್ನು ಕೈಗೊಳ್ಳಲು ನನ್ನ ಸಂಸದರ ನಿಧಿಯಿಂದ 2 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇನೆ, ಇದು ಈ ಮರವನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಲು ಮತ್ತು ಈ ಸ್ಥಳಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕಷಿರ್ಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿಕೊಂಡಿದ್ದಾರೆ.