ರಾಜಸ್ಥಾನದಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ 1,564 ವಾರ್ಡ್‍ಗಳಲ್ಲಿ ಮತದಾನ ನಡೆದಿತ್ತು. ಶನಿವಾರದಂದು ಮತಎಣಿಕೆ ಆರಂಭಗೊಂಡು ಫಲಿತಾಂಶ ಘೋಷಣೆಗೆ ಕೆಲವೇ ಗಂಟೆಗಳವರೆಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. 670 ಸೀಟುಗಳಲ್ಲಿ ‘ಕೈ’ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. 200ರ ಪೈಕಿ 93 ಜಿಲ್ಲಾ ಪರಿಷತ್ ಸೀಟುಗಳು ಕಾಂಗ್ರೆಸ್ ತೆಕ್ಕೆಗೆ ಜಾರಿವೆ.
ಮತ್ತೊಂದೆಡೆ, 551 ಪಂಚಾಯಿತಿ ಸೀಟುಗಳನ್ನು ಬಾಚಿಕೊಂಡಿರುವ ಬಿಜೆಪಿಯು, 88 ಜಿಲ್ಲಾ ಪರಿಷತ್ ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಎಸ್‍ಪಿಗೆ 11 ಸೀಟುಗಳು, ಎನ್‍ಡಿಎ ಮೈತ್ರಿ ತೊರೆದಿರುವ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷಕ್ಕೆ(ಆರ್‍ಎಲ್‍ಪಿ) 40 ಪಂಚಾಯಿತಿ ಸಮಿತಿ ಸೀಟುಗಳು ಸಿಕ್ಕಿವೆ.
ಮತ್ತೊಮ್ಮೆ ನಂ.1 ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಮೋದಿ
ಬಿಎಸ್‍ಪಿಗೆ ಮೂರು ಜಿಲ್ಲಾ ಪರಿಷತ್‍ಗಳು ಒಲಿದಿವೆ. ಸುಮಾರು 290 ಪಂಚಾಯಿತಿ ಸಮಿತಿಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿರುವುದು ಗಮನಾರ್ಹ ಸಂಗತಿಯಾಗಿದೆ.
ಕೋವಿಡ್-19 ತಡೆ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದರೆ ಮಾತ್ರವೇ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ರಾಜಸ್ಥಾನ ಸರಕಾರಕ್ಕೆ ಖಡಕ್ ಆದೇಶ ಹೊರಡಿಸಿತ್ತು.
ಸುಮಾರು 25.60 ಲಕ್ಷ ಅರ್ಹ ಮತದಾರರು 16.86 ಲಕ್ಷ ಮಂದಿ ಈ ಬಾರಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. ಜೋಧಪುರದ ಆಯು ಗ್ರಾಮ ಪಂಚಾಯಿತಿಯಲ್ಲಿ ರಾಜ್ಯದಲ್ಲೇ ಗರಿಷ್ಠ , ಅಂದರೆ 77.02% ಮತದಾನ ನಡೆದಿತ್ತು. ಎರಡನೇ ಹಂತದ ಮತದಾನದಲ್ಲಿ 10 ಪಂಚಾಯಿತಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ವಿಶೇಷ ಸಂಗತಿ.