alex Certify ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರೇಮ ಪ್ರಕರಣ, ಅಕ್ರಮ ಸಂಬಂಧ ಕಾರಣವೆಂದ ರಾಜಸ್ಥಾನ ಸಚಿವ: ಪುರಾವೆ ಕೇಳಿದ ಅಪ್ರಾಪ್ತೆ ತಂದೆ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರೇಮ ಪ್ರಕರಣ, ಅಕ್ರಮ ಸಂಬಂಧ ಕಾರಣವೆಂದ ರಾಜಸ್ಥಾನ ಸಚಿವ: ಪುರಾವೆ ಕೇಳಿದ ಅಪ್ರಾಪ್ತೆ ತಂದೆ ಆಕ್ರೋಶ

ಕೋಟಾ: ಕೋಚಿಂಗ್ ಹಬ್ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿಂದೆ ಪ್ರೇಮ ಪ್ರಕರಣಗಳು ಕಾರಣ ಎಂದು ರಾಜಸ್ಥಾನದ ಸಚಿವರೊಬ್ಬರು ಆರೋಪಿಸಿದ್ದಾರೆ.

ಸಚಿವ ಶಾಂತಿ ಧಾರಿವಾಲ್, ಇತ್ತೀಚೆಗೆ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿ ಸೇರಿದಂತೆ ಕೋಟಾದಲ್ಲಿ ನಡೆದ ಅನೇಕ ಆತ್ಮಹತ್ಯೆಗಳು ಪ್ರೇಮ ಪ್ರಕರಣಗಳ ಪರಿಣಾಮಗಳಾಗಿವೆ. ಮೃತ ಬಾಲಕಿ ತನ್ನ ಆತ್ಮಹತ್ಯೆಗೆ ಪ್ರೇಮ ಸಂಬಂಧವೇ ಕಾರಣ ಎಂದು ಪತ್ರ ಬರೆದಿದ್ದಾಳೆ ಎಂದು ಧರಿವಾಲ್ ಹೇಳಿದ್ದಾರೆ.

ಅಕ್ರಮ ಸಂಬಂಧದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅವಳು ಪತ್ರವನ್ನು ಬರೆದಿದ್ದಳು. ವಿದ್ಯಾರ್ಥಿಗಳ ಆತ್ಮಹತ್ಯೆಯ ಹಿಂದಿನ ಮತ್ತೊಂದು ಕಾರಣ “ಪೋಷಕರ ಒತ್ತಡ” ಎಂದು ಸಚಿವ ಧಾರಿವಾಲ್ ಉಲ್ಲೇಖಿಸಿದ್ದಾರೆ. ಕೋಚಿಂಗ್ ವಿದ್ಯಾರ್ಥಿಗಳ ಎಲ್ಲಾ ಆತ್ಮಹತ್ಯೆಗಳು ನಿಖರವಾದ ಕಾರಣವನ್ನು ಕಂಡುಹಿಡಿಯಲು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಈ ಟೀಕೆಗಳು ಹುಡುಗಿಯ ತಂದೆಯ ಕೋಪಕ್ಕೆ ಕಾರಣವಾಗಿದ್ದು, ಸಚಿವರು ತಮ್ಮ ಆರೋಪಗಳ ಬಗ್ಗೆ ಪುರಾವೆ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿಯ ಹಾಸ್ಟೆಲ್ ಕೊಠಡಿಯಿಂದ ಯಾವುದೇ ಪತ್ರ ಅಥವಾ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳಿದ್ದು, ಸಚಿವ ಧಾರಿವಾಲ್ ಅವರ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.

ಮೃತ NEET ಆಕಾಂಕ್ಷಿ ರಿಚಾ ಅವರ ಮೃತದೇಹವನ್ನು ಸ್ವೀಕರಿಸಲು ಗುರುವಾರ ಬೆಳಿಗ್ಗೆ ರಾಂಚಿಯಿಂದ ಕೋಟಾ ತಲುಪಿದ ತಂದೆ, ಧರಿವಾಲ್ ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಆರೋಪ ಸಾಬೀತುಪಡಿಸಲು ಸಾಕ್ಷ್ಯವನ್ನು ಕೇಳಿದ್ದಾರೆ.

‘ನನ್ನ ಮಗಳಿಗೆ ಯಾವುದೇ ಸಂಬಂಧ ಇರಲಿಲ್ಲ. ಅವರ ಬಳಿ(ಧಾರಿವಾಲ್) ಅಂತಹ ಯಾವುದೇ ಪುರಾವೆಗಳಿದ್ದರೆ, ಅದನ್ನು ನನ್ನೊಂದಿಗೆ ಹಂಚಿಕೊಳ್ಳಬೇಕು ಎಂದು ಹುಡುಗಿಯ ತಂದೆ ರವೀಂದ್ರ ಸಿನ್ಹಾ ತಿಳಿಸಿದ್ದಾರೆ, ಕೋಟಾದ ಕೆಲವು ಹುಡುಗರು ತರಬೇತಿ ಸಂಸ್ಥೆಯಿಂದ ಹೋಗುವಾಗ ಮತ್ತು ಬರುವಾಗ ಚುಡಾಯಿಸುತ್ತಾರೆ ಎಂದು ಅವರ ಮಗಳು ನನಗೆ ತಿಳಿಸಿದ್ದಳು ಎಂದು ಹೇಳಿದ್ದಾರೆ. ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಸೌಲಭ್ಯಗಳ ಬಗ್ಗೆ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಆತ್ಮಹತ್ಯೆ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ವಿಜ್ಞಾನ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ ಪೆಕ್ಟರ್ ದವೇಶ್ ಭಾರದ್ವಾಜ್ ಅವರು ರಿಚಾ ಅವರ ಹಾಸ್ಟೆಲ್ ಕೊಠಡಿಯಿಂದ ಯಾವುದೇ ಆತ್ಮಹತ್ಯೆ ಟಿಪ್ಪಣಿಯನ್ನು ವಶಪಡಿಸಿಕೊಂಡಿಲ್ಲ. ಪೊಲೀಸರಿಗೆ ಅಂತಹ ಯಾವುದೇ ಸುಳಿವು ಸಿಗಲಿಲ್ಲ ಎಂದು ಹುಡುಗಿ ಆತ್ಮಹತ್ಯೆಗೆ ಕಾರಣವಾದ ಪ್ರೇಮ ಪ್ರಕರಣವನ್ನು ನಿರಾಕರಿಸಿದರು.

ಮೃತ ಬಾಲಕಿ 11ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಈ ವರ್ಷದ ಮೇ ತಿಂಗಳಿನಿಂದ ಇಲ್ಲಿನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೀಟ್‌ಗೆ ತಯಾರಿ ನಡೆಸುತ್ತಿದ್ದಳು. ಅಧಿಕೃತ ಅಂಕಿಅಂಶಗಳ ಪ್ರಕಾರ, ರಿಚಾ ಈ ವರ್ಷ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡ 23 ನೇ ವಿದ್ಯಾರ್ಥಿಯಾಗಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...