
ಸಿರೋಹಿ: ಪರೀಕ್ಷೆಗೆ ಸರಿಯಾಗಿ ಓದದ, ತಯಾರಿ ನಡೆಸದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗಳನ್ನು ಥಳಿಸಿ ಕೊಂದಿದ್ದಾನೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಆರೋಪಿ ಪ್ರೇಮ್ ನಗರದ ನಿವಾಸಿ ಫತೇ ಮೊಹಮ್ಮದ್(42) ನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ಪುಷ್ಪೇಂದ್ರ ವರ್ಮಾ ತಿಳಿಸಿದ್ದಾರೆ.
11ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಪರೀಕ್ಷೆಗೆ ಓದದೇ ಇರುವುದಕ್ಕೆ ಮೊಹಮ್ಮದ್ ಕೋಪಗೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಗುರುವಾರ ದೊಣ್ಣೆಯಿಂದ ಆಕೆಗೆ ಥಳಿಸಿದ್ದಾನೆ. ಬಾಲಕಿಯ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಶನಿವಾರ ಬಂಧಿಸಲಾಗಿದ್ದು, ಕೊಲೆಗೈದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.
ಆಂತರಿಕ ಗಾಯಗಳಿಂದಾಗಿ ಹುಡುಗಿ ಸಾವನ್ನಪ್ಪಿರಬಹುದು, ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಡಿಎಸ್ಪಿ ಹೇಳಿದ್ದಾರೆ.