alex Certify 10 ತಿಂಗಳ ಅವಧಿಯಲ್ಲಿ ಈ ಬಿಜೆಪಿ ಶಾಸಕನ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ತಿಂಗಳ ಅವಧಿಯಲ್ಲಿ ಈ ಬಿಜೆಪಿ ಶಾಸಕನ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ದಾಖಲು

ಕಳೆದ 10 ತಿಂಗಳಿನಲ್ಲಿ ಬಿಜೆಪಿ ಶಾಸಕ ಪ್ರತಾಪ್​ ಭೀಲ್​ ವಿರುದ್ಧ 2ನೇ ಬಾರಿಗೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪ್ರತಾಪ್ ಭೀಲ್ ರಾಜಸ್ಥಾನದ ಗೊಗುಂಡಾ ಕ್ಷೇತ್ರದ ಶಾಸಕರಾಗಿದ್ದಾರೆ.

ಎರಡೂ ಪ್ರಕರಣಗಳಲ್ಲಿ ಶಾಸಕ ಪ್ರತಾಪ್​ ಭೀಲ್​ ಮದುವೆಯಾಗುತ್ತೇನೆಂದು ನಂಬಿಸಿ ಉದ್ಯೋಗ ಕೊಡಿಸುವುದಾಗಿಯೂ ಹೇಳಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತೆ ಅಂಬಾಮಾತಾ ಎಸ್ಪಿಯನ್ನು ಸಂಪರ್ಕಿಸಿದ್ದು ಶಾಸಕ ಪ್ರತಾಪ್​ ಭೀಲ್​ ನನಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಮದುವೆಯಾಗೋದಾಗಿಯೂ ನಂಬಿಸಿ ನನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾಳೆ.

ಸುಖೇರ್​ನಲ್ಲಿ 10 ತಿಂಗಳ ಹಿಂದೆಯೂ ಇದೇ ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಕೇಸ್​ನಲ್ಲಿ ಸಿಐಡಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಸಂತ್ರಸ್ತೆಯು ನೀಡಿರುವ ಮಾಹಿತಿಯ ಪ್ರಕಾರ, ಉದ್ಯೋಗ ಬೇಕೆಂದು ಶಾಸಕರಲ್ಲಿ ಕೇಳಿದಾಗ ಉದ್ಯೋಗ ಕೊಡಿಸುವ ಭರವಸೆ ನೀಡಿದ ಪ್ರತಾಪ್​ ಆಕೆಗೆ ಪದೇ ಪದೇ ಕರೆ ಮಾಡಲು ಆರಂಭಿಸಿದ್ದರು. ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಸಂತ್ರಸ್ತೆಯ ಮನೆಗೆ ತೆರಳಿದ್ದ ಶಾಸಕ ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...