ಕಳೆದ 10 ತಿಂಗಳಿನಲ್ಲಿ ಬಿಜೆಪಿ ಶಾಸಕ ಪ್ರತಾಪ್ ಭೀಲ್ ವಿರುದ್ಧ 2ನೇ ಬಾರಿಗೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪ್ರತಾಪ್ ಭೀಲ್ ರಾಜಸ್ಥಾನದ ಗೊಗುಂಡಾ ಕ್ಷೇತ್ರದ ಶಾಸಕರಾಗಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಶಾಸಕ ಪ್ರತಾಪ್ ಭೀಲ್ ಮದುವೆಯಾಗುತ್ತೇನೆಂದು ನಂಬಿಸಿ ಉದ್ಯೋಗ ಕೊಡಿಸುವುದಾಗಿಯೂ ಹೇಳಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತೆ ಅಂಬಾಮಾತಾ ಎಸ್ಪಿಯನ್ನು ಸಂಪರ್ಕಿಸಿದ್ದು ಶಾಸಕ ಪ್ರತಾಪ್ ಭೀಲ್ ನನಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಮದುವೆಯಾಗೋದಾಗಿಯೂ ನಂಬಿಸಿ ನನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾಳೆ.
ಸುಖೇರ್ನಲ್ಲಿ 10 ತಿಂಗಳ ಹಿಂದೆಯೂ ಇದೇ ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಕೇಸ್ನಲ್ಲಿ ಸಿಐಡಿ ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಸಂತ್ರಸ್ತೆಯು ನೀಡಿರುವ ಮಾಹಿತಿಯ ಪ್ರಕಾರ, ಉದ್ಯೋಗ ಬೇಕೆಂದು ಶಾಸಕರಲ್ಲಿ ಕೇಳಿದಾಗ ಉದ್ಯೋಗ ಕೊಡಿಸುವ ಭರವಸೆ ನೀಡಿದ ಪ್ರತಾಪ್ ಆಕೆಗೆ ಪದೇ ಪದೇ ಕರೆ ಮಾಡಲು ಆರಂಭಿಸಿದ್ದರು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಸಂತ್ರಸ್ತೆಯ ಮನೆಗೆ ತೆರಳಿದ್ದ ಶಾಸಕ ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದ್ದಾರೆ.