alex Certify ಸಿಲಿಂಡರ್ ಸ್ಪೋಟದಿಂದ ಮಸಣವಾಯ್ತು ಮದುವೆ ಮನೆ: 4 ಜನ ಸಾವು, 60 ಕ್ಕೂ ಅಧಿಕ ಅತಿಥಿಗಳಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಲಿಂಡರ್ ಸ್ಪೋಟದಿಂದ ಮಸಣವಾಯ್ತು ಮದುವೆ ಮನೆ: 4 ಜನ ಸಾವು, 60 ಕ್ಕೂ ಅಧಿಕ ಅತಿಥಿಗಳಿಗೆ ಗಾಯ

ರಾಜಸ್ಥಾನದ ಜೋಧ್‌ಪುರದ ಭುಂಗ್ರಾ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮದುವೆಗೆ ಬಂದಿದ್ದ 60 ಜನ ಅತಿಥಿಗಳು ಗಾಯಗೊಂಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದ ನಂತರ ನೀರಿನ ಟ್ಯಾಂಕರ್‌ ಗಳೊಂದಿಗೆ ಅಗ್ನಿಶಾಮಕ ದಳದ ತಂಡವನ್ನು ಕರೆಸಲಾಗಿದ್ದು, ಬೆಂಕಿ ನಂದಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಪ್ರಕಾರ, ಗುರುವಾರ ಭುಂಗ್ರಾದಿಂದ ವರನ ಮೆರವಣಿಗೆ ಪ್ರಾರಂಭವಾಗುವ ಮೊದಲು ಈ ಘಟನೆ ನಡೆದಿದೆ. ಭುಂಗ್ರಾ ಗ್ರಾಮದಲ್ಲಿ ಮದುವೆಯ ಸಂದರ್ಭದಲ್ಲಿ ಮನೆಗೆ ಬೆಂಕಿ ತಗುಲಿ ಸುಮಾರು 60 ಜನರು ಗಾಯಗೊಂಡಿದ್ದಾರೆ, ಇದು ತುಂಬಾ ಗಂಭೀರವಾದ ಅವಘಡವಾಗಿದೆ. ಗಾಯಗೊಂಡ 60 ರಲ್ಲಿ 42 ಜನರನ್ನು MGH ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಜೋಧ್‌ ಪುರದ ಭುಂಗ್ರಾ ಗ್ರಾಮದ ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಉಂಟಾದ ಬೆಂಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...