ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಪರಿಚಯಿಸಲಾಗುತ್ತಿರುವ ವಿಸ್ತಾ ಡೋಮ್ ಕೋಚ್ಗಳು ಅದಾಗಲೇ ಜನಪ್ರಿಯವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹಾಗೂ ಭಾರೀ ಕುತೂಹಲವಿರುವ ಸ್ಥಳೀಯರಲ್ಲಿ ಈ ರೈಲು ಭಾರೀ ಸದ್ದು ಮಾಡಿದೆ.
ಇದೀಗ ವಿಸ್ತಾ ಡೋಮ್ ಕೋಚ್ಗಳನ್ನು ನ್ಯೂ ಜಲ್ಪಾಯ್ಗುರಿ-ಅಲಿಪುರ್ದಾರ್ ನಡವೆ ಪರಿಚಯಿಸಲಾಗಿದೆ. ಈ ರೈಲಿನಲ್ಲಿ ಎರಡು ಎಸಿ ಕೋಚ್ಗಳು ಹಾಗೂ ಎರಡು ಎಸಿ ರಹಿತ ಕೋಚ್ಗಳಿರಲಿವೆ.
ಕುರಿಗಳ ಹಿಂಡಿನಿಂದ ಅರಳಿದ ಕಲೆ: ಈ ಮೂಲಕ ಅಗಲಿದ ಚಿಕ್ಕಮ್ಮನಿಗೆ ಕೃಷಿಕನ ಶ್ರದ್ಧಾಂಜಲಿ
ಈ ರೈಲು ಡಾರ್ಜಿಲಿಂಗ್ ಸುತ್ತಲಿನ ಶಿವೋಕ್, ತೀಸ್ತಾ ನದಿ, ಬಗ್ರಾಕೋಟ್ನ ಚಹಾ ತೋಟಗಳು, ಊದ್ಲಬಾರಿ ಹಾಗೂ ಡಲ್ಗಾಂನ್ನಂಥ ಸುಂದರ ತಾಣಗಳನ್ನು ಹಾದು ಹೋಗಲಿದೆ.