alex Certify ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರಿಗೆ ರೈಲ್ವೇ ಇಲಾಖೆಯಿಂದ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರಿಗೆ ರೈಲ್ವೇ ಇಲಾಖೆಯಿಂದ ಗುಡ್‌ ನ್ಯೂಸ್

ಚಿಕ್ಕ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುವ ಪೋಷಕರಿಗೆ ರೈಲ್ವೆ ಇಲಾಖೆ ಒಂದು ಸಂತಸದ ಸುದ್ದಿ ಕೊಟ್ಟಿದೆ. ಇನ್ನು ಮುಂದೆ ಚಿಕ್ಕ ಮಕ್ಕಳು ಆರಾಮವಾಗಿ ನಿದ್ದೆ ಮಾಡುತ್ತಾ ಪ್ರಯಾಣ ಮಾಡಲು ಅನುಕೂಲವಾಗುವಂತೆ `ಬೇಬಿ ಬರ್ತ್’ ಅನ್ನು ರೈಲ್ವೆ ಇಲಾಖೆ ಪರಿಚಯಿಸುತ್ತಿದೆ.

ಆರಂಭಿಕ ಹಂತದಲ್ಲಿ ಲಕ್ನೋ ಮೇಲ್ ರೈಲಿನಲ್ಲಿ ಲೋಯರ್ ಬರ್ತ್ ನ ಪಕ್ಕದಲ್ಲಿಯೇ ಈ `ಬೇಬಿ ಬರ್ತ್’ ಅಳವಡಿಸಲಾಗಿದೆ. ಇದು ಮಡಚುವಂತಹ ಸೀಟು ಆಗಿರುತ್ತದೆ. ಪ್ರಯಾಣಿಕರಿಂದ ಬರುವ ಪ್ರತಿಕ್ರಿಯೆಗಳನ್ನು ಗಮನಿಸಿ ಈ ಹೊಸ ವ್ಯವಸ್ಥೆಯನ್ನು ಇತರೆ ರೈಲುಗಳಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುರ್ಖಾ ಕಡ್ಡಾಯ ವಿರುದ್ಧ ಬೀದಿಗಿಳಿದ ಅಫ್ಘಾನಿಸ್ತಾನ ಮಹಿಳೆಯರು

ಈ ಬೇಬಿ ಬರ್ತ್ 770 ಮಿಲಿಮೀಟರ್ ಉದ್ದ, 255 ಮಿಲಿಮೀಟರ್ ಅಗಲ ಮತ್ತು 76.2 ಮಿಲಿಮೀಟರ್ ಎತ್ತರವಿರುತ್ತದೆ. ಬಳಕೆ ಮಾಡದೇ ಇರುವ ಸಂದರ್ಭದಲ್ಲಿ ಇದನ್ನು ಮಡಚಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...