ಚಿಕ್ಕ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುವ ಪೋಷಕರಿಗೆ ರೈಲ್ವೆ ಇಲಾಖೆ ಒಂದು ಸಂತಸದ ಸುದ್ದಿ ಕೊಟ್ಟಿದೆ. ಇನ್ನು ಮುಂದೆ ಚಿಕ್ಕ ಮಕ್ಕಳು ಆರಾಮವಾಗಿ ನಿದ್ದೆ ಮಾಡುತ್ತಾ ಪ್ರಯಾಣ ಮಾಡಲು ಅನುಕೂಲವಾಗುವಂತೆ `ಬೇಬಿ ಬರ್ತ್’ ಅನ್ನು ರೈಲ್ವೆ ಇಲಾಖೆ ಪರಿಚಯಿಸುತ್ತಿದೆ.
ಆರಂಭಿಕ ಹಂತದಲ್ಲಿ ಲಕ್ನೋ ಮೇಲ್ ರೈಲಿನಲ್ಲಿ ಲೋಯರ್ ಬರ್ತ್ ನ ಪಕ್ಕದಲ್ಲಿಯೇ ಈ `ಬೇಬಿ ಬರ್ತ್’ ಅಳವಡಿಸಲಾಗಿದೆ. ಇದು ಮಡಚುವಂತಹ ಸೀಟು ಆಗಿರುತ್ತದೆ. ಪ್ರಯಾಣಿಕರಿಂದ ಬರುವ ಪ್ರತಿಕ್ರಿಯೆಗಳನ್ನು ಗಮನಿಸಿ ಈ ಹೊಸ ವ್ಯವಸ್ಥೆಯನ್ನು ಇತರೆ ರೈಲುಗಳಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುರ್ಖಾ ಕಡ್ಡಾಯ ವಿರುದ್ಧ ಬೀದಿಗಿಳಿದ ಅಫ್ಘಾನಿಸ್ತಾನ ಮಹಿಳೆಯರು
ಈ ಬೇಬಿ ಬರ್ತ್ 770 ಮಿಲಿಮೀಟರ್ ಉದ್ದ, 255 ಮಿಲಿಮೀಟರ್ ಅಗಲ ಮತ್ತು 76.2 ಮಿಲಿಮೀಟರ್ ಎತ್ತರವಿರುತ್ತದೆ. ಬಳಕೆ ಮಾಡದೇ ಇರುವ ಸಂದರ್ಭದಲ್ಲಿ ಇದನ್ನು ಮಡಚಬಹುದಾಗಿದೆ.