alex Certify ರೈಲ್ವೇ ಪ್ರಯಾಣಿಕರೇ ಎಚ್ಚರ : ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೇ ಪ್ರಯಾಣಿಕರೇ ಎಚ್ಚರ : ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ

ಮೈಸೂರು ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್   ತಾಳಗುಪ್ಪದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕ್ ಮಾಡುವ ಟ್ರಾವೆಲ್ ಏಜೆಂಟ್ರ ವಿರುದ್ಧ ದಾಳಿ ನಡೆಸಿ 3 ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ತಾಳಗುಪ್ಪದಗಣೇಶ್ ರಾಮ್ ನಾಯಕ್, 31 ವರ್ಷ (ಶ್ರೀ ರೇಣುಕಾ ಸೈಬರ್ ಸೆಂಟರ್) ರೇವಣ್ಣಪ್ಪ, 36 ವರ್ಷ (ಶ್ರೀ ಸಂವಹನ ಮೊಬೈಲ್ ಮಾರಾಟ) ಮತ್ತು ಪ್ರಶಾಂತ್ ಹೆಗಡೆ, 46 ವರ್ಷ (ಆರ್ಯ ಸೈಬರ್ ವಲಯ) ಇವರನ್ನು ಬಂಧಿಸಲಾಗಿದೆ.ಮುಂಬರುವ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನುಗಮನದಲ್ಲಿಟ್ಟುಕೊಂಡು ಅನಧಿಕೃತ ರೈಲ್ವೆ ಟಿಕೆಟ್ ಬುಕ್ ಮಾಡುವ ಟ್ರಾವೆಲ್ ಏಜೆಂಟ್ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ.

ಜೆ ಕೆ ಶರ್ಮಾ,ಐಆರ್ಪಿಎಫ್ಎಸ್, ವಿಭಾಗೀಯ ಭದ್ರತಾ ಆಯುಕ್ತರು, ಆರ್ಫಿಎಫ್ ಮೈಸೂರು ಇವರ ನಿರ್ದೇಶನದಂತೆ, ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ತಂಡದಲ್ಲಿ ಅಪರಾಧ ನಿರೀಕ್ಷಕ ಎಂ ನಿಶಾದ್, ಸಬ್ ಇನ್ಸ್ಪೆಕ್ಟರ್ ಬಿ ಚಂದ್ರಶೇಖರ್, ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ್ ಮತ್ತು ಈಶ್ವರ್ ರಾವ್, ಹೆಡ್ ಕಾನ್ಸ್ಟೆಬಲ್ ಡಿ ಚೇತನ್ ಮತ್ತಿತರಿದ್ದರು.

3 ಸೈಬರ್ ವಲಯಗಳ ಮೇಲೆ ದಾಳಿ ನಡೆಸಿ ಒಟ್ಟು ರೂ 2.5 ಲಕ್ಷ ಮೌಲ್ಯದ ರೈಲ್ವೆ ಇ-ಟಿಕೆಟ್ಗಳು ಮತ್ತು 1.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್, ಪ್ರಿಂಟರ್, ಮೊಬೈಲ್ ಫೋನ್ ಗಳಂತಹ ಗ್ಯಾಜೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ

ಹಬ್ಬ ಹರಿದಿನದಂತಹ ಒತ್ತಡದ ಸಮಯದಲ್ಲಿ ಬೇರೆ ಬೇರೆ ಪೋನ್ ಸಂಖ್ಯೆಗಳಿಗೆ ಲಿಂಕ್ ಆದ ಬಹುವ್ಯಕ್ತಿ ಐಡಿಗಳನ್ನು ಸೃಜಿಸಯವಯದಯ ಮತ್ತು ಅನಧಿಕೃತವಾಗಿ ಇ-ಟಿಕೆಟ್ ಜನರೇಟ್ ಮಾಡಿ ಜನರಿಂದ ಹೆಚ್ಚಿನ ಕಮಿಷನ್ನನ್ನು ಚಾರ್ಜ್ ಮಾಡುವುದು ಈ ಗ್ಯಾಂಗ್ಗಳ ಕೆಲಸವಾಗಿದೆ. ಇಂತಹ ಟ್ರಾವೆಲ್ ಏಜೆಂಟ್ಗಳೊಂದಿಗೆ ಜಾಗರೂಕರಾಗಿರಿ ಮತ್ತು ಅವರ ದುರಾಸೆಗೆ ಬೀಳದಂತೆ ರೈಲ್ವೇ ಅಧಿಕಾರಿಗಳು ಪ್ರಯಾಣಿಕರಿಗೆ ಎಚ್ಚರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...