ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಥ್ಲೀಟ್‌ಗಳು ಮತ್ತು ಕೋಚ್‌ಗಳಿಗೆ ದೊಡ್ಡ ಪ್ರೋತ್ಸಾಹಧನ ಹಾಗೂ ಬಡ್ತಿಗಳನ್ನು ರೈಲ್ವೇ ಸಚಿವಾಲಯ ಘೋಷಿಸಿದೆ.
“ರೈಲ್ವೇ ಕ್ರೀಡಾ ಉತ್ತೇಜನ ಮಂಡಳಿಯ 25 ಅಥ್ಲೀಟ್‌ಗಳು, 5 ಕೋಚ್‌ಗಳು, 1 ಫಿಸಿಯೋಗಳು ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತದ ಅಥ್ಲೀಟ್‌ಗಳ ಪೈಕಿ 20% ರೈಲ್ವೇಯವರೇ ಆಗಿದ್ದಾರೆ,” ಎಂದು ಅಧಿಕೃತ ಪ್ರಕಟಣೆ ಮೂಲಕ ತಿಳಿದುಬಂದಿದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಫೋಟೋ ವೈರಲ್: ಶಾಸಕರ ಭವನದಲ್ಲಿ ಕಸಗುಡಿಸಿದ ಸರಳತೆಗೆ ಭಾರಿ ಮೆಚ್ಚುಗೆ
ತನ್ನ ಉದ್ಯೋಗಿಗಳಿಗೆ ಕೆಳಕಂಡಂತೆ ಬಹುಮಾನಗಳನ್ನು ರೈಲ್ವೇ ಇಲಾಖೆ ಘೋಷಿಸಿದೆ:
ಚಿನ್ನದ ಪದಕ ಗೆದ್ದರೆ: ಮೂರು ಕೋಟಿ ರೂಪಾಯಿಗಳು
ಬೆಳ್ಳಿ ಪದಕ ಗೆದ್ದರೆ: ಎರಡು ಕೋಟಿ ರೂಪಾಯಿಗಳು
ಕಂಚಿನ ಪದಕ ಗೆದ್ದರೆ: ಒಂದು ಕೋಟಿ ರೂಪಾಯಿಗಳು
8ನೇ ಸ್ಥಾನದವರೆಗೂ ಬಂದರೆ: 35 ಲಕ್ಷ ರೂಪಾಯಿಗಳು
ಭಾಗವಹಿಸಿದರೆ: 7.5 ಲಕ್ಷ ರೂಪಾಯಿ
ಚಿನ್ನದ ಪದಕ ವಿಜೇತ ಅಥ್ಲೀಟ್‌ನ ಕೋಚ್: 25 ಲಕ್ಷ ರೂಪಾಯಿಗಳು
ಬೆಳ್ಳಿ ಪದಕ ವಿಜೇತ ಅಥ್ಲೀಟ್‌ನ ಕೋಚ್‌ಗೆ: 20 ಲಕ್ಷ ರೂಪಾಯಿಗಳು
ಕಂಚಿನ ಪದಕ ವಿಜೇತ ಕೋಚ್‌ಗೆ: 15 ಲಕ್ಷ ರೂಪಾಯಿಗಳು
ಭಾಗವಹಿಸಿದ ಅಥ್ಲೀಟ್‌ಗಳ ಕೋಚ್‌ಗಳಿಗೆ: 7.5 ಲಕ್ಷ ರೂಪಾಯಿಗಳು