alex Certify ಹಾಲಾಡಿ ಶ್ರೀನಿವಾಸ ಶೆಟ್ಟಿ ಫೋಟೋ ವೈರಲ್: ಶಾಸಕರ ಭವನದಲ್ಲಿ ಕಸಗುಡಿಸಿದ ಸರಳತೆಗೆ ಭಾರಿ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಾಡಿ ಶ್ರೀನಿವಾಸ ಶೆಟ್ಟಿ ಫೋಟೋ ವೈರಲ್: ಶಾಸಕರ ಭವನದಲ್ಲಿ ಕಸಗುಡಿಸಿದ ಸರಳತೆಗೆ ಭಾರಿ ಮೆಚ್ಚುಗೆ

ತಮ್ಮ ಸರಳತೆಯಿಂದಲೇ ಗಮನ ಸೆಳೆದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬೆಂಗಳೂರಿನ ಶಾಸಕರ ಭವನದಲ್ಲಿ ತಮ್ಮ ಕೊಠಡಿ ಹೊರಗೆ ಕಸಗುಡಿಸುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರ ಭವನದಲ್ಲಿ ತಮ್ಮ ಕೊಠಡಿಯನ್ನು ತಾವೇ ಸ್ವಚ್ಛಗೊಳಿಸಿಕೊಂಡಿದ್ದಾರೆ. ಕೊಠಡಿ ಮುಂದಿನ ಕಸವನ್ನು ಕೂಡ ಗೂಡಿಸಿದ್ದಾರೆ.

ತಮ್ಮ ಫೋಟೋ ವೈರಲ್ ಆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇದರಲ್ಲಿ ವಿಶೇಷವೇನಿಲ್ಲ. ನಾನು ಮೊದಲಿನಿಂದ ಸುತ್ತಲಿನ ಪರಿಸರ ಸ್ವಚ್ಛವಾಗಿ ಇರಬೇಕೆಂದು ಬಯಸುತ್ತೇನೆ. ಮನೆಯಿರಲಿ, ಶಾಸಕರ ಭವನವಿರಲಿ ಬೆಳಿಗ್ಗೆ ಬೇಗನೆ ಎದ್ದು ಸ್ವಚ್ಛಮಾಡುವ ಪದ್ಧತಿಯನ್ನು ಮೊದಲಿನಿಂದಲೂ ಬೆಳೆಸಿಕೊಂಡಿದ್ದೇನೆ. ಇದರಲ್ಲಿ ಸರಳತೆ ಏನಿಲ್ಲ ಎಂದು ಅವರು ಹೇಳಿದ್ದಾರೆ. ಅದೇನೆ ಇರಲಿ, ಶಾಸಕರ ಸರಳತೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...