alex Certify ರೈಲು ಏರಿ ಪ್ರಯಾಣಿಕರ ಕುಂದು-ಕೊರತೆ ಆಲಿಸಿದ ಕೇಂದ್ರ ಸಚಿವ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಏರಿ ಪ್ರಯಾಣಿಕರ ಕುಂದು-ಕೊರತೆ ಆಲಿಸಿದ ಕೇಂದ್ರ ಸಚಿವ; ವಿಡಿಯೋ ವೈರಲ್

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನವದೆಹಲಿ-ಅಜ್ಮೀರ್ ಶತಾಬ್ದಿ ಎಕ್ಸ್ ಪ್ರೆಸ್‌ ರೈಲಿಗೆ ಭೇಟಿ ನೀಡಿ ಪರಿಶೀಲಿಸಿದರು. ತಮ್ಮ ಭೇಟಿಯ ಸಮಯದಲ್ಲಿ ಸಚಿವರು ರೈಲನ್ನು ಪರಿಶೀಲಿಸಿ ಪ್ರಯಾಣಿಕರಿಂದ ಪ್ರತಿಕ್ರಿಯೆ ಕೇಳಿದರು.

ರೈಲಿನಲ್ಲಿ ರೈಲ್ವೇ ಸಚಿವರು ಖುದ್ದು ಮೌಲ್ಯಮಾಪನ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಪರಿಶೀಲನೆ ವೇಳೆ ಸಚಿವರಿಗೆ ಪ್ರಯಾಣಿಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ರೈಲುಗಳು ಮೊದಲಿಗಿಂತ ಹೆಚ್ಚು ಸ್ವಚ್ಛವಾಗಿವೆ, ಅವು ಸಮಯಕ್ಕೆ ಸರಿಯಾಗಿ ಬರುತ್ತಿವೆ, ಪ್ಲಾಟ್‌ಫಾರ್ಮ್‌ಗಳು ಸ್ವಚ್ಛವಾಗಿವೆ ಎಂದು ಪ್ರಯಾಣಿಕರು ತಿಳಿಸಿದರು.

ಈ ಮಾರ್ಗದಲ್ಲಿ ಎರಡು ಉಪಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದರು. ಮೊದಲು ಟ್ರ್ಯಾಕ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ಮಾರ್ಗದಲ್ಲಿ ವೇಗವನ್ನು ಹೆಚ್ಚಿಸುವುದು. ಎರಡನೆಯದಾಗಿ ಪ್ರಯೋಗಗಳು ಮತ್ತು ಪರೀಕ್ಷೆಯ ನಂತರ ಪ್ಯಾಂಟೋಗ್ರಾಫ್ ರೈಲುಗಳು (ವಂದೇ ಭಾರತ್) ಶೀಘ್ರದಲ್ಲೇ ದೆಹಲಿ-ಜೈಪುರ ನಡುವೆ ಈ ಟ್ರ್ಯಾಕ್‌ನಲ್ಲಿ ಓಡಲಿವೆ ಎಂದು ರೈಲ್ವೆ ಸಚಿವರು ಹೇಳಿದರು.

ಈ ಮಾರ್ಗದಲ್ಲಿ ಭಾರತೀಯ ರೈಲ್ವೇ ಹೊಸ ಯೋಜನೆಗಳನ್ನು ಪ್ರಾರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.

— Ashwini Vaishnaw (मोदी का परिवार) (@AshwiniVaishnaw) March 19, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...