ರಾಯಚೂರು: ಆರ್.ಟಿ.ಪಿ.ಎಸ್.ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಾಲ್ಕು ಘಟಗಳನ್ನು ಬಂದ್ ಮಾಡಲಾಗಿದೆ.
ರಾಯಚೂರಿನ ಶಕ್ತಿ ನಗರದಲ್ಲಿರುವ ಆರ್.ಟಿ.ಪಿ.ಎಸ್.ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, 8 ಘತಕಗಳ ಪೈಕಿ 4 ಘಟಕಗಳನ್ನು ಬಂದ್ ಮಾಡಲಾಗಿದೆ. 2 ಘಟಕಗಳ ದುರಸ್ತಿ ಕಾರ್ಯ ನಡೆಯುತ್ತಿದೆ.
ರಾಜ್ಯಕ್ಕೆ ಸುಮಾರು 40% ವಿದ್ಯುತ್ ಪೂರೈಕೆ ಮಾಡುವ ಆರ್.ಟಿ.ಪಿ.ಎಸ್ ವಿದ್ಯುತ್ ಉತ್ಪಾದನಾ 4 ಘಟಕಗಳು ಕಳೆದ ಎರಡು ದಿನಗಳಿಂದ ಬಂದ್ ಆಗಿವೆ. ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದು, ಸದ್ಯ 2 ಮತ್ತು 6 ನೇ ಘಟಕಗಳ ದುರಸ್ತಿ ಕಾರ್ಯ ನಡೆಯುತ್ತಿದೆ. 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಆರ್.ಟಿ.ಪಿ.ಎಸ್ ಹೊಂದಿದೆ. 4 ಘಟಕಗಳು ಬಂದ್ ಆಗಿರುವುದರಿಂದ 903 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ.