ಡಾವೋಸ್‌ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡುವ ಸಂದರ್ಭ ಅವರ ಟೆಲಿಪ್ರಾಂಪ್ಟರ್ ಕೈಕೊಟ್ಟ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಣಕ ಮಾಡಿದ್ದಾರೆ.
“ಟೆಲಿಪ್ರಾಂಪ್ಟರ್‌ಗೂ ಸಹ ಅಷ್ಟೊಂದು ಸುಳ್ಳುಗಳನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ,” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಧಾನಿ ಮೋದಿಯವರನ್ನು ಅಣಕ ಮಾಡಿದ್ದಾರೆ. ರಾಹುಲ್ ಗಾಂಧಿಯವರರ ಅಣಕಕ್ಕೆ ಬಿಜೆಪಿಯ ಅನೇಕ ನಾಯಕರು ಪ್ರತಿಯಾಗಿ ಅಣಕ ಮಾಡಿದ್ದಾರೆ.
ಚಳಿಗಾಲದ ತ್ವಚೆ ಸಮಸ್ಯೆಗೆ ಪರಿಹಾರ ಪುದೀನಾ ಫೇಸ್ ಪ್ಯಾಕ್
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಸೋಮವಾರದಂದು ಡಾವೋಸ್ ಆರ್ಥಿಕ ಶೃಂಗದ ವೇಳೆ ಮಾತನಾಡುತ್ತಿದ್ದರು. ಈ ವೇಳೆ ಟೆಲಿಪ್ರಾಂಪ್ಟರ್ ಕೆಲಸ ಮಾಡುವುದನ್ನು ನಿಲ್ಲಿಸಿದ ಕಾರಣ ಕೆಲಕಾಲ ಮೌನವಾದ ಪ್ರಧಾನಿ ಬಳಿಕ ಮಾತು ಮುಂದುವರೆಸಿದರು.
ರಾಹುಲ್‌ರ ಅಣಕಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಶಲಭ್ ಮಣಿ ತ್ರಿಪಾಠಿ, “ತಾಂತ್ರಿಕ ದೋಷಕ್ಕೂ ಸಂತಸ ಪಟ್ಟವರಿಗೆ ಈ ಸಮಸ್ಯೆ ವಿಶ್ವ ಆರ್ಥಿಕ ಶೃಂಗದ್ದು ಎಂದು ಅರಿವಾಗಲಿಲ್ಲವೇ? ಅವರಿಗೆ ಪ್ರಧಾನಿ ಮಾತನ್ನು ಪ್ಯಾಚ್ ಮಾಡಲು ಆಗದೇ ಇದ್ದ ಕಾರಣ ಅವರನ್ನು ಮತ್ತೆ ಮಾತು ಆರಂಭಿಸಲು ವಿನಂತಿಸಿಕೊಂಡಿದ್ದರು, ಇದು ಕ್ಲೌನ್ ಶ್ವಾಬ್ ಮತ್ತೊಮ್ಮೆ ಪರಿಚಯ ಕೊಟ್ಟು ಸೆಶನ್ ಅನ್ನು ಆರಂಭಿಸುವುದಾಗಿ ಹೇಳಿದ್ದರಿಂದಲೇ ಅರಿಯಬಹುದಾಗಿದೆ……” ಎಂದಿದ್ದಾರೆ.