alex Certify ಟೀಂ ಇಂಡಿಯಾ ತಂಡದ ಹೆಡ್​ಕೋಚ್​ ಆಗಿ ರಾಹುಲ್​ ದ್ರಾವಿಡ್​ ನೇಮಕಕ್ಕೆ ಕೌಂಟ್​ಡೌನ್​; ಉನ್ನತ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ‘ದಿ ವಾಲ್​’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ತಂಡದ ಹೆಡ್​ಕೋಚ್​ ಆಗಿ ರಾಹುಲ್​ ದ್ರಾವಿಡ್​ ನೇಮಕಕ್ಕೆ ಕೌಂಟ್​ಡೌನ್​; ಉನ್ನತ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ‘ದಿ ವಾಲ್​’

ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್​ ದ್ರಾವಿಡ್​ ಭಾರತೀಯ ಕ್ರಿಕೆಟ್​ ತಂಡದ ಮುಂದಿನ ಮುಖ್ಯ ಕೋಚ್​ ಸ್ಥಾನಕ್ಕೆ ಔಪಚಾರಿಕವಾಗಿ ಅರ್ಜಿ ಸಲ್ಲಿಸಿದ್ದು ಈ ಮೂಲಕ ಅವರು ಟೀಂ ಇಂಡಿಯಾ ತಂಡದ ಉನ್ನತ ಸ್ಥಾನಕ್ಕೆ ಏರುವುದು ಖಚಿತವಾಗಿದೆ.

ಅಲ್ಲದೇ ರಾಹುಲ್​ ದ್ರಾವಿಡ್​​ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್​ ಶಾರ ಏಕೈಕ ಆಯ್ಕೆಯಾಗಿದ್ದರು ಎನ್ನಲಾಗಿದೆ. ಇಂದು ಹೆಡ್​ ಕೋಚ್​ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾದ್ದರಿಂದ ರಾಹುಲ್​ ದ್ರಾವಿಡ್ ಔಪಚಾರಿಕವಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬೌಲಿಂಗ್​ ಕೋಚ್​​ ಪರಸ್​ ಹಾಗೂ ಫೀಲ್ಡಿಂಗ್​​ ಕೋಚ್​ ಅಭಯ್​ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೀನಾದಲ್ಲಿ ಮತ್ತೆ ಕೊರೊನಾ ನರ್ತನ ಆರಂಭ; ಚಿಂತೆಯಲ್ಲಿ ಮುಳುಗಿದೆ ಡ್ರ್ಯಾಗನ್​ ರಾಷ್ಟ್ರ….!

ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ನಡುವಿನ ಐಪಿಎಲ್​ ಫೈನಲ್​ ಪಂದ್ಯಾವಳಿಯ ವೇಳೆ ದುಬೈನಲ್ಲಿದ್ದ ದ್ರಾವಿಡ್​ ಬಿಸಿಸಿಐ ಆಡಳಿತ ಮಂಡಳಿಯನ್ನು ಭೇಟಿಯಾಗಿದ್ದರು. ಇಲ್ಲಿ ಐಸಿಸಿ ಟಿ 20 ವರ್ಲ್ಡ್​ ಕಪ್​ ಬಳಿಕ ರವಿ ಶಾಸ್ತ್ರಿ ಹೆಡ್​ ಕೋಚ್​ ಸ್ಥಾನದಿಂದ ಕೆಳಗಿಳಿಯಲಿದ್ದು ಆ ಬಳಿಕ ರಾಹುಲ್​ ದ್ರಾವಿಡ್​​ರಿಗೆ ಟೀಂ ಇಂಡಿಯಾದ ಈ ಉನ್ನತ ಸ್ಥಾನವನ್ನು ಅಲಂಕರಿಸುವಂತೆ ಗಂಗೂಲಿ ಹಾಗೂ ಜಯ್​ ಶಾ ಹೇಳಿದ್ದರು ಎನ್ನಲಾಗಿದೆ.

ರಾಹುಲ್​ ದ್ರಾವಿಡ್​ ಮಾರ್ಗದರ್ಶನದ ಅಡಿಯಲ್ಲಿ ನ್ಯೂಜಿಲೆಂಡ್​ ವಿರುದ್ಧದ ಸರಣಿಯನ್ನು ಟೀಂ ಇಂಡಿಯಾ ಎದುರಿಸಲಿದೆ. ಈ ಸರಣಿಯಲ್ಲಿ ರೋಹಿತ್​ ಶರ್ಮಾ ಟೀಂ ಇಂಡಿಯಾ ತಂಡದ ನಾಯಕತ್ವ ವಹಿಸಲಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...