ಕೋವಿಡ್ 19ನಿಂದ ಸಾವನ್ನಪ್ಪಿದ ಟೆನಿಸಿಯ 61 ವರ್ಷದ ರೇಡಿಯೋ ಹೋಸ್ಟ್ ಕೊರೊನಾ ಲಸಿಕೆಯ ಮೇಲೆ ನಂಬಿಕೆಯನ್ನೇ ಹೊಂದಿರಲಿಲ್ಲ. ನ್ಯಾಶ್ವಿಲ್ಲೆ ರೇಡಿಯೋ ಸ್ಟೇಷನ್ ಸೂಪರ್ ಟಾಕ್ 99.7 ಡಬ್ಲೂಟಿಎಸ್ ಆಗಸ್ಟ್ 21ರಂದು ಫಿಲ್ ವಾಲೆಂಟೈನ್ಸ್ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಹಿತಿ ನೀಡಿದೆ.
ಫಿಲ್ ಕೊರೊನಾ ಲಸಿಕೆ ಬಗ್ಗೆ ಸಂಶಯ ಹೊಂದಿದ್ದರು. ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಫಿಲ್ ಆಸ್ಪತ್ರೆಗೆ ದಾಖಲಾಗುವ ಮುನ್ನ ಇದರಿಂದ ಪಾರಾಗಲು ಏನಾದರೂ ದಾರಿ ಇದೆಯೇ ಎಂದು ಕೇಳಿದ್ದರಂತೆ.
ಇದಕ್ಕೆ ವೈದ್ಯರು ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಕೋವಿಡ್ ನಿಂದ ತಾನು ಸಾಯೋದಿಲ್ಲ ಎಂದು ನಂಬಿದ್ದ ಫಿಲ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದರು.
ಫಿಲ್ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಅವರನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ಈ ವೇಳೆ ಫಿಲ್ ತನ್ನ ಸಹೋದರ ಮಾರ್ಕ್ ಬಳಿಕ ಲಸಿಕೆ ಹಾಕಿಸಿಕೊಳ್ಳದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹೀಗಾಗಿ ಯಾವುದೇ ರಾಜಕೀಯ ಸಿದ್ಧಾಂತದ ಬಗ್ಗೆ ಚಿಂತಿಸೋದನ್ನು ಬಿಟ್ಟು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮಾರ್ಕ್ ಹೇಳಿದ್ದಾರೆ.