alex Certify ಈ ಕಾರಣಕ್ಕೆ ನೆಟ್ಟಿಗರ ಮನ ಗೆದ್ದಿದೆ ನವಜೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ನೆಟ್ಟಿಗರ ಮನ ಗೆದ್ದಿದೆ ನವಜೋಡಿ…!

ಹಿಂದೂ ಸಂಪ್ರದಾಯದಂತೆ ಮದುವೆಯಾಗೋದು ಅಂದರೆ ತುಂಬಾ ಶಾಸ್ತ್ರಗಳು ಇರುತ್ವೆ. ಎಲ್ಲಾ ಶಾಸ್ತ್ರಗಳನ್ನ ಪೂರೈಸೋ ಅಷ್ಟರಲ್ಲಿ ವಧು ವರರಿಗೂ ಸಾಕು ಸಾಕೆನಿಸುತ್ತೆ.

ಆದರೆ ಇಲ್ಲೊಂದು ದಂಪತಿ ಪುರೋಹಿತರು ಶಾಸ್ತ್ರದ ಮಧ್ಯೆ ಬ್ರೇಕ್​ ತೆಗೆದುಕೊಂಡ ವೇಳೆ ಮದುವೆ ಮಂಟಪದಲ್ಲೇ ಕೂತು ಬಾಟಲಿಯಲ್ಲಿ ಆಟವಾಡುತ್ತಾ ಟೈಮ್​ ಪಾಸ್​ ಮಾಡಿದ್ದು ಈ ಮುದ್ದಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಜೋಡಿ ತಮ್ಮದೇ ಲೋಕದಲ್ಲಿ ಮುಳುಗಿಕೊಂಡು ಬಾಟಲಿಯಲ್ಲಿ ಆಟವಾಡುತ್ತಿರೋ ದೃಶ್ಯ ತುಂಬಾನೇ ಮುದ್ದಾಗಿದೆ. ಈ ವಿಡಿಯೋಗೆ, ಪುರೋಹಿತರಿಗೆ ವಿಶ್ರಾಂತಿ ಬೇಕು ಎನಿಸಿದಾಗ ನಾವು ಆಟವಾಡೋಣ ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋವನ್ನ ಮೊದಲು ಇನ್​ಸ್ಟಾಗ್ರಾಂನಲ್ಲಿ ಅತುಲ್​ ಸೈನಿ ಎಂಬವರು ಶೇರ್​ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು ನೆಟ್ಟಿಗರು ಬೆಸ್ಟ್​ ಫ್ರೆಂಡ್ಸ್​ ಜೀವನ ಸಂಗಾತಿಗಳಾಗಿ ಬದಲಾದ್ರೆ ಹೀಗೆ ಆಗೋದು ಅಂತಾ ಅಭಿಪ್ರಾಯ ಹೊರಹಾಕಿದ್ದಾರೆ.

View this post on Instagram

A post shared by Atul Saini (@insideoutdog_own)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...