ಹಿಂದೂ ಸಂಪ್ರದಾಯದಂತೆ ಮದುವೆಯಾಗೋದು ಅಂದರೆ ತುಂಬಾ ಶಾಸ್ತ್ರಗಳು ಇರುತ್ವೆ. ಎಲ್ಲಾ ಶಾಸ್ತ್ರಗಳನ್ನ ಪೂರೈಸೋ ಅಷ್ಟರಲ್ಲಿ ವಧು ವರರಿಗೂ ಸಾಕು ಸಾಕೆನಿಸುತ್ತೆ.
ಆದರೆ ಇಲ್ಲೊಂದು ದಂಪತಿ ಪುರೋಹಿತರು ಶಾಸ್ತ್ರದ ಮಧ್ಯೆ ಬ್ರೇಕ್ ತೆಗೆದುಕೊಂಡ ವೇಳೆ ಮದುವೆ ಮಂಟಪದಲ್ಲೇ ಕೂತು ಬಾಟಲಿಯಲ್ಲಿ ಆಟವಾಡುತ್ತಾ ಟೈಮ್ ಪಾಸ್ ಮಾಡಿದ್ದು ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಜೋಡಿ ತಮ್ಮದೇ ಲೋಕದಲ್ಲಿ ಮುಳುಗಿಕೊಂಡು ಬಾಟಲಿಯಲ್ಲಿ ಆಟವಾಡುತ್ತಿರೋ ದೃಶ್ಯ ತುಂಬಾನೇ ಮುದ್ದಾಗಿದೆ. ಈ ವಿಡಿಯೋಗೆ, ಪುರೋಹಿತರಿಗೆ ವಿಶ್ರಾಂತಿ ಬೇಕು ಎನಿಸಿದಾಗ ನಾವು ಆಟವಾಡೋಣ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋವನ್ನ ಮೊದಲು ಇನ್ಸ್ಟಾಗ್ರಾಂನಲ್ಲಿ ಅತುಲ್ ಸೈನಿ ಎಂಬವರು ಶೇರ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು ನೆಟ್ಟಿಗರು ಬೆಸ್ಟ್ ಫ್ರೆಂಡ್ಸ್ ಜೀವನ ಸಂಗಾತಿಗಳಾಗಿ ಬದಲಾದ್ರೆ ಹೀಗೆ ಆಗೋದು ಅಂತಾ ಅಭಿಪ್ರಾಯ ಹೊರಹಾಕಿದ್ದಾರೆ.
https://www.instagram.com/p/COTHJMeDkgk/?utm_source=ig_web_copy_link