ಪ್ರವಾಸೀ ನ್ಯೂಜ಼ಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದ ವೇಳೆ ಭಾರತ ತಂಡದ ಮುಂಚೂಣಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಒಂದಲ್ಲ, ಎರಡು ಹೊಸ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿದೆ.
ಸದ್ಯ ಟೆಸ್ಟ್ ವೃತ್ತಿಜೀವನದಲ್ಲಿ 413 ವಿಕೆಟ್ ಸಂಪಾದನೆ ಮಾಡಿರುವ ಅಶ್ವಿನ್, ಇನ್ನು ಐದು ವಿಕೆಟ್ ಪಡೆದರೆ ಹರ್ಭಜನ್ ಸಿಂಗ್‌ರ 417 ವಿಕೆಟ್‌ಗಳ ದಾಖಲೆ ಮೀರಿ ಮುಂದೆ ಸಾಗಲಿದ್ದು, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಲಿದ್ದಾರೆ. ಅನಿಲ್ ಕುಂಬ್ಳೆ (619 ವಿಕೆಟ್) ಮತ್ತು ಕಪಿಲ್ ದೇವ್ (434 ವಿಕೆಟ್) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ
ಇದೇ ವೇಳೆ, ತಮಿಳುನಾಡಿನ ಸ್ಪಿನ್ನರ್ ಏನಾದರೂ ಈ ಪಂದ್ಯದಲ್ಲಿ ಒಟ್ಟಾರೆ 10 ವಿಕೆಟ್ ಸಾಧನೆಗೈದರೆ, ಭಾರತದ ಪರ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆಯೊಂದಿಗೆ ಬರಲಿದ್ದಾರೆ. ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ ಎಂಟು ಬಾರಿ ಹತ್ತು ಅಥವಾ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆಗೈದಿದ್ದಾರೆ. ಅಶ್ವಿನ್ ಈ ಸಾಧನೆಯನ್ನು ಏಳು ಬಾರಿ ಮಾಡಿದ್ದಾರೆ.
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್ ಪಂದ್ಯವೊಂದರಲ್ಲಿ 10 ಕ್ಕಿಂತ ಹೆಚ್ಚು ವಿಕೆಟ್ ಪಡೆದ ನಿದರ್ಶನವನ್ನು 22 ಬಾರಿ ಮಾಡಿದ್ದು, ಇದುವರೆಗೂ ಅಳಿಸಲಾರದ ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.