ಕೆಆರ್ಎಸ್ ಡ್ಯಾಂ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ನಡೆಯುತ್ತಿರುವ ವಾಕ್ಸಮರದ ವಿಚಾರವಾಗಿ ಬೊಮ್ಮನಹಳ್ಳಿಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ರು. ಸಂಸತ್ ಸದಸ್ಯರಾಗಿ ಅವರ ಕೆಲಸವನ್ನ ಅವರು ಮಾಡಲಿ. ಜನರ ಆಸ್ತಿ ಪಾಸ್ತಿ ಉಳಿಸುವ ವಿಚಾರದಲ್ಲಿ ನಮ್ಮ ತಕರಾರಿಲ್ಲ ಎಂದು ಹೇಳಿದ್ರು.
ಕುಮಾರಸ್ವಾಮಿಗೆ ಸುಮಲತಾ ವಿರುದ್ಧ ಹಳೆಯ ಸೇಡಿದೆ. ರಾಜಕೀಯ ದ್ವೇಷವನ್ನ ಹೆಚ್ಡಿಕೆ ಈ ರೀತಿ ತೀರಿಸಿಕೊಳ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ನಡೆದ ವಿಚಾರವನ್ನ ಹೆಚ್ಡಿಕೆ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ರು.
ಇನ್ನು ಗಣಿ ಪ್ರದೇಶಗಳಿಗೆ ಸಂಸದೆ ಸುಮಲತಾ ಭೇಟಿ ವಿಚಾರವಾಗಿ ಮಾತನಾಡಿದ ಅವ್ರು ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದೇವೆ. ಗಣಿಗಾರಿಕಾ ಪ್ರದೇಶಗಳಲ್ಲಿ ಅಕ್ರಮ ತಡೆಯಲು ಆಯಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ಗೆ ಸೂಚನೆ ನೀಡಿದ್ದೇವೆ. ಸಂಸದರಾಗಿ ಅವರು ಜನರ ಆಸ್ತಿಪಾಸ್ತಿ ಕಾಪಾಡಲು ಮುಂದಾಗಿದ್ದಾರೆ ಎಂದರೆ ಅದು ಸ್ವಾಗತಾರ್ಹ ಎಂದು ಹೇಳಿದ್ರು.