alex Certify ಕಂದಾಯ ಸಚಿವ ಆರ್. ಅಶೋಕ ಮತ್ತೆ ಮಾನವೀಯ ಕಾರ್ಯ, ಕೊರೋನಾದಿಂದ ಮೃತಪಟ್ಟವರ ಪಿಂಡಪ್ರದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂದಾಯ ಸಚಿವ ಆರ್. ಅಶೋಕ ಮತ್ತೆ ಮಾನವೀಯ ಕಾರ್ಯ, ಕೊರೋನಾದಿಂದ ಮೃತಪಟ್ಟವರ ಪಿಂಡಪ್ರದಾನ

ಬೆಂಗಳೂರು: ಕೊರೊನಾದಿಂದ ಮೃತಪಟ್ಟ ವಾರಸುದಾರರಿಲ್ಲದ 1000 ಕ್ಕೂ ಅಧಿಕ ಜನರ ಆಸ್ಥಿಯನ್ನು ಕಾವೇರಿಯಲ್ಲಿ ವಿಸರ್ಜನೆ ಮಾಡಿ ಸದ್ಗತಿಗೆ ಪ್ರಾರ್ಥಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಇಂದು ಪಿಂಡ ಪ್ರದಾನ ಮಾಡಲಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಕೊರೋನಾದಿಂದ ಮೃತಪಟ್ಟ 1200 ಕ್ಕೂ ಅಧಿಕ ಮಂದಿಯ ಪಿಂಡಪ್ರದಾನ ಮಾಡಲಿದ್ದಾರೆ. ಶವಗಳಿಗೆ ಮುಕ್ತಿ ದೊರಕಿಸಲು ಜೂನ್ ತಿಂಗಳಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗಿತ್ತು. ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಪಿಂಡಪ್ರದಾನ ಮಾಡುವುದರೊಂದಿಗೆ ಮೋಕ್ಷ ದೊರಕಿಸಿಕೊಡುವ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಮೃತಪಟ್ಟವರಿಗೆ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸರ್ಕಾರ ಮುಂದಾಗಿದೆ. ಯಾರೂ ಅನಾಥರಲ್ಲ ಎಂದು ಹೇಳುವ ಮೂಲಕ ಅಶೋಕ್ ಮಾನವೀಯತೆ ಮೆರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...