alex Certify ಪರೀಕ್ಷೆಯಲ್ಲಿ ಹೀಗೂ ಇತ್ತು ಒಂದು ಪ್ರಶ್ನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆಯಲ್ಲಿ ಹೀಗೂ ಇತ್ತು ಒಂದು ಪ್ರಶ್ನೆ….!

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಒಂದು ರೀತಿಯ ಭಯ ಎನ್ನುವುದು ನಮ್ಮ ಕಾಲ ಮಾತ್ರವಲ್ಲ, ನಮ್ಮ ಪೂರ್ವಜರ ಕಾಲದಿಂದಲೂ ಸತ್ಯ. ಪರೀಕ್ಷೆಗೆಂದು ವಾರಗಟ್ಟಲೇ ಶ್ರಮಪಟ್ಟು ಅಧ್ಯಯನ ಮಾಡಿದರೂ ಸಹ ಕೆಲವೊಮ್ಮೆ ಓದದೇ ಬಿಟ್ಟ ಭಾಗದಿಂದ ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಲ್ಲಿ ಬರುವುದು ಸಹಜ.

ಆದರೆ ಇಲ್ಲೊಂದು ಅಸಜಹವಾದ ಪ್ರಶ್ನೆ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಬೆಕಾ ಎಲ್‌ ರೋಜರ್ಸ್ ಹೆಸರಿನ ಟ್ವಿಟರ್‌ ಬಳಕೆದಾರಿಣಿ ಈ ಪ್ರಶ್ನೆಯ ಚಿತ್ರ ಶೇರ್‌ ಮಾಡಿಕೊಂಡಿದ್ದು, “ಪರೀಕ್ಷೆಯ ಈ ಪತ್ರಿಕೆ ನನಗೆ ಇಷ್ಟವಾಯಿತು,” ಎಂದಿದ್ದಾರೆ.

ಕಪಾಳಮೋಕ್ಷಕ್ಕೊಳಗಾಗಿದ್ದ ಕ್ಯಾಬ್ ಚಾಲಕ ಈಗ ರಾಜಕಾರಣಿ…!

“ನೀವು ಅಧ್ಯಯನ ಮಾಡಲೆಂದು ಸಮಯ ಹಾಕಿದ ವಿಷಯವೊಂದರ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳದೇ ಇರಬಹುದು. ಅದು ಯಾವುದು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ? ವಿವರಿಸಿ,” ಎಂದು ಪ್ರಶ್ನೆ ಪತ್ರಿಕೆಯ ಕೊನೆಯ ಪ್ರಶ್ನೆಯಾಗಿ ಕೇಳಲಾಗಿದೆ.

ಈ ಪೋಸ್ಟ್‌‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ನನಗೆ ಇದೂ ಸಹ ಇಷ್ಟವಾಗಿದೆ….. ಯಾವ ವಿಷಯದ ಕಲಿಕೆ ಸಾಧ್ಯವಾಗಿಲ್ಲವೋ ಆ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಒಂದು ಅವಕಾಶ ಕೊಡಿ,” ಎಂದು ಕಾಮೆಂಟ್ ಹಾಕಿದ್ದಾರೆ.

“ಇಂಥ ಒಂದು ಪ್ರಶ್ನೆ ಪತ್ರಿ ಪರೀಕ್ಷೆಯಲ್ಲಿ ಇದ್ದಿದ್ದರೆ, ಸ್ಮರಣಾ ಶಕ್ತಿಗಿಂತಲೂ ಬುದ್ಧಿಮತ್ತೆ ಸುಧಾರಣೆಯಾಗುತ್ತಿತ್ತು,” ಎಂದು ಮತ್ತೊಬ್ಬ ಟ್ವಿಟ್ಟಿಗ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...