alex Certify ನರಿಯ ಕೊಂದ ಹೆಬ್ಬಾವಿನ ಮೇಲೆ ಕುಳಿತ ಚಿಟ್ಟೆ ಫೋಟೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರಿಯ ಕೊಂದ ಹೆಬ್ಬಾವಿನ ಮೇಲೆ ಕುಳಿತ ಚಿಟ್ಟೆ ಫೋಟೋ ವೈರಲ್..!

ಹೆಬ್ಬಾವುಗಳು ಆಡು, ಜಿಂಕೆಗಳು ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುವ ಫೋಟೋಗಳು ಮತ್ತು ವಿಡಿಯೋಗಳು ಆಗಾಗ್ಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತವೆ.

ಇದೀಗ ಹೆಬ್ಬಾವು ನರಿ ಕತ್ತು ಹಿಸುಕಿ ಕೊಂದಿದೆ. ಈ ವೇಳೆ ಹೆಬ್ಬಾವಿನ ಮೇಲೆ ಚಿಟ್ಟೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಟ್ಟೆಯು ತನ್ನ ರೆಕ್ಕೆಗಳನ್ನು ಅಗಲವಾಗಿ ಹರಡಿಕೊಂಡು ಹೆಬ್ಬಾವಿನ ಮೇಲೆ ಶಾಂತವಾಗಿ ಕುಳಿತಿರುವುದು ನೆಟ್ಟಿಗರನ್ನು ಬೆರಗುಗೊಳಿಸಿದೆ. ಹೆಬ್ಬಾವು ನರಿಯ ಕತ್ತು ಹಿಸುಕಿ ಕೊಂದಿದೆ. ಚಿಟ್ಟೆಯು ಹೆಬ್ಬಾವಿಗೆ ಏನು ಹೇಳುತ್ತಿದೆ ಅಂತಾ ನೀವು ಯೋಚಿಸುತ್ತಿದ್ದೀರಾ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

ನರಿಯನ್ನು ಸುತ್ತುವರಿದು ಕೊಂದಿರುವ ಹೆಬ್ಬಾವಿನ ತಲೆಯ ಮೇಲೆ ಚಿಟ್ಟೆಯು ಕುಳಿತಿದೆ. ವಾಸ್ತವವಾಗಿ, ನರಿಯ ಮೂತಿಯ ಮೇಲೂ ಕೆಲವು ನೊಣಗಳು ಕುಳಿತಿರುವುದನ್ನು ಫೋಟೋದಲ್ಲಿ ಗಮನಿಸಬಹುದು.

ಈ ಫೋಟೋವನ್ನು ಟ್ವಿಟ್ಟರ್ ಮತ್ತು ರೆಡ್ಡಿಟ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ.

— Rebecca Herbert (@RebeccaH2030) October 27, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...