
ಇದೀಗ ಹೆಬ್ಬಾವು ನರಿ ಕತ್ತು ಹಿಸುಕಿ ಕೊಂದಿದೆ. ಈ ವೇಳೆ ಹೆಬ್ಬಾವಿನ ಮೇಲೆ ಚಿಟ್ಟೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಟ್ಟೆಯು ತನ್ನ ರೆಕ್ಕೆಗಳನ್ನು ಅಗಲವಾಗಿ ಹರಡಿಕೊಂಡು ಹೆಬ್ಬಾವಿನ ಮೇಲೆ ಶಾಂತವಾಗಿ ಕುಳಿತಿರುವುದು ನೆಟ್ಟಿಗರನ್ನು ಬೆರಗುಗೊಳಿಸಿದೆ. ಹೆಬ್ಬಾವು ನರಿಯ ಕತ್ತು ಹಿಸುಕಿ ಕೊಂದಿದೆ. ಚಿಟ್ಟೆಯು ಹೆಬ್ಬಾವಿಗೆ ಏನು ಹೇಳುತ್ತಿದೆ ಅಂತಾ ನೀವು ಯೋಚಿಸುತ್ತಿದ್ದೀರಾ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.
ನರಿಯನ್ನು ಸುತ್ತುವರಿದು ಕೊಂದಿರುವ ಹೆಬ್ಬಾವಿನ ತಲೆಯ ಮೇಲೆ ಚಿಟ್ಟೆಯು ಕುಳಿತಿದೆ. ವಾಸ್ತವವಾಗಿ, ನರಿಯ ಮೂತಿಯ ಮೇಲೂ ಕೆಲವು ನೊಣಗಳು ಕುಳಿತಿರುವುದನ್ನು ಫೋಟೋದಲ್ಲಿ ಗಮನಿಸಬಹುದು.
ಈ ಫೋಟೋವನ್ನು ಟ್ವಿಟ್ಟರ್ ಮತ್ತು ರೆಡ್ಡಿಟ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ.