alex Certify ವೈರಲ್​ ಆಗಿದ್ದ ರೀಮಿಕ್ಸ್​ ಹಾಡಿಗೆ ಸ್ಟೆಪ್​ ಹಾಕಿದ ಪಿ.ವಿ.ಸಿಂಧು, ಈಕೆ ಆಲ್​ರೌಂಡರ್​ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್​ ಆಗಿದ್ದ ರೀಮಿಕ್ಸ್​ ಹಾಡಿಗೆ ಸ್ಟೆಪ್​ ಹಾಕಿದ ಪಿ.ವಿ.ಸಿಂಧು, ಈಕೆ ಆಲ್​ರೌಂಡರ್​ ಎಂದ ನೆಟ್ಟಿಗರು

ದೇಶದ ಬ್ಯಾಡ್ಮಿಟನ್​ ಧ್ರುವತಾರೆ ಪಿ.ವಿ. ಸಿಂಧು ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ರೀಮಿಕ್ಸ್​ ಹಾಡಿಗೆ ಸ್ಟೆಪ್​ ಹಾಕಿ, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಬ್ಯಾಡ್ಮಿಂಟನ್​ ಸ್ಟಾರ್​ ಆಟಗಾರ್ತಿ ಸಿಂಧು ತನ್ನ ಶಟ್ಲಿಂಗ್​ ಕೌಶಲ್ಯದ ಹೊರತಾಗಿ ತಮ್ಮ ನೃತ್ಯ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಕಚ್ಚಾ ಬಾದಮ್​ ಮತ್ತು ಮಾಯಾಕಿರಿರ್ಯೇ ಟ್ಯೂನ್​ಗಳಿಗೆ ನೃತ್ಯ ಮಾಡಿ ಲಕ್ಷಾಂತರ ನೆಟ್ಟಿಗರ ಹೃದಯ ಗೆದ್ದಿದ್ದರು.

ಆಕೆ ಇತ್ತೀಚೆಗೆ ಇನ್​ಸ್ಟಾ ಗ್ರಾಮ್​ನಲ್ಲಿ ಮತ್ತೊಂದು ಡ್ಯಾನ್ಸ್​ ವೀಡಿಯೊವನ್ನು ಪೋಸ್ಟ್​ ಮಾಡಿದ್ದಾರೆ, ಮತ್ತೊಂದು ಟ್ರೆಂಡಿಂಗ್​ ಆಗಿದ್ದ ಆಡಿಯೊಗೆ ತನ್ನ ಸ್ಟೆಪ್​ ಹಾಕುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಕಪ್ಪು ಪ್ಯಾಂಟ್​, ಸನ್​ಗ್ಲಾಸ್​ ಹಾಕಿ ಗಮನ ಸೆಳೆಯುವ ಸಿಂಧುವಿನ ವಿಡಿಯೋ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ. “ನಿಮಗೆ ಯಾವುದು ನಿಜವಾಗಿಯೂ ಸಂತೋಷವನ್ನು ನೀಡುತ್ತದೆಯೋ, ಅದನ್ನು ಮಾಡಿ’ ಎಂದು ಪಿವಿ ಸಿಂಧು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಈ ವಿಡಿಯೋ 2.20 ಲಕ್ಷ ಲೈಕ್​ ಪಡೆದುಕೊಂಡಿದ್ದು, ಸಾವಿರಾರು ಕಾಮೆಂಟ್​ ಬಂದಿದೆ. ಒಬ್ಬ ಬಳಕೆದಾರರು ನೀವು ಆಲ್​ ರೌಂಡರ್​ ಎಂದು ಕರೆದಿದ್ದಾರೆ. ಮತ್ತೊಬ್ಬರು ಪಿವಿ ಸಿಂಧು ಹ್ಯಾಟ್ಸ್​ ಆಫ್ ​! ಇದಕ್ಕಾಗಿಯೇ ನೀವು ಉತ್ತಮ ಕ್ರೀಡಾಪಟು ಮತ್ತು ನೀವು ತುಂಬಾ ಸುಂದರವಾಗಿದ್ದೀರಿ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...