ದೇಶದ ಬ್ಯಾಡ್ಮಿಟನ್ ಧ್ರುವತಾರೆ ಪಿ.ವಿ. ಸಿಂಧು ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ರೀಮಿಕ್ಸ್ ಹಾಡಿಗೆ ಸ್ಟೆಪ್ ಹಾಕಿ, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ್ತಿ ಸಿಂಧು ತನ್ನ ಶಟ್ಲಿಂಗ್ ಕೌಶಲ್ಯದ ಹೊರತಾಗಿ ತಮ್ಮ ನೃತ್ಯ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಕಚ್ಚಾ ಬಾದಮ್ ಮತ್ತು ಮಾಯಾಕಿರಿರ್ಯೇ ಟ್ಯೂನ್ಗಳಿಗೆ ನೃತ್ಯ ಮಾಡಿ ಲಕ್ಷಾಂತರ ನೆಟ್ಟಿಗರ ಹೃದಯ ಗೆದ್ದಿದ್ದರು.
ಆಕೆ ಇತ್ತೀಚೆಗೆ ಇನ್ಸ್ಟಾ ಗ್ರಾಮ್ನಲ್ಲಿ ಮತ್ತೊಂದು ಡ್ಯಾನ್ಸ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಮತ್ತೊಂದು ಟ್ರೆಂಡಿಂಗ್ ಆಗಿದ್ದ ಆಡಿಯೊಗೆ ತನ್ನ ಸ್ಟೆಪ್ ಹಾಕುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಕಪ್ಪು ಪ್ಯಾಂಟ್, ಸನ್ಗ್ಲಾಸ್ ಹಾಕಿ ಗಮನ ಸೆಳೆಯುವ ಸಿಂಧುವಿನ ವಿಡಿಯೋ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ. “ನಿಮಗೆ ಯಾವುದು ನಿಜವಾಗಿಯೂ ಸಂತೋಷವನ್ನು ನೀಡುತ್ತದೆಯೋ, ಅದನ್ನು ಮಾಡಿ’ ಎಂದು ಪಿವಿ ಸಿಂಧು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ವಿಡಿಯೋ 2.20 ಲಕ್ಷ ಲೈಕ್ ಪಡೆದುಕೊಂಡಿದ್ದು, ಸಾವಿರಾರು ಕಾಮೆಂಟ್ ಬಂದಿದೆ. ಒಬ್ಬ ಬಳಕೆದಾರರು ನೀವು ಆಲ್ ರೌಂಡರ್ ಎಂದು ಕರೆದಿದ್ದಾರೆ. ಮತ್ತೊಬ್ಬರು ಪಿವಿ ಸಿಂಧು ಹ್ಯಾಟ್ಸ್ ಆಫ್ ! ಇದಕ್ಕಾಗಿಯೇ ನೀವು ಉತ್ತಮ ಕ್ರೀಡಾಪಟು ಮತ್ತು ನೀವು ತುಂಬಾ ಸುಂದರವಾಗಿದ್ದೀರಿ ಎಂದಿದ್ದಾರೆ.