alex Certify ಈ ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡಲೇಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡಲೇಬೇಡಿ

ಹೆಚ್ಚಿನವರಿಗೆ ಪ್ರತಿಯೊಂದು ಹಣ್ಣು ಮತ್ತು ತರಕಾರಿಗಳನ್ನು ಫ್ರಿಜ್ ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಕೆಲವು ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಪೋಷಕಾಂಶ ಹಾಳಾಗುತ್ತದೆ. ಹಾಗಾಗಿ ನೀವು ಕೆಲವು ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡಬಾರದು.

ಬಾಳೆಹಣ್ಣು : ಬಾಳೆಹಣ್ಣನ್ನು ಫ್ರಿಜ್ ನಲ್ಲಿ ಇಡುವುದರಿಂದ ಕಪ್ಪಾಗುತ್ತದೆ. ಇದರ ಕಾಂಡದಿಂದ ಎಥಿಲೀನ್ ಅನಿಲವು ಬಿಡುಗಡೆಯಾಗುತ್ತದೆ. ಇದು ಸುತ್ತಮುತ್ತಲಿನ ಹಣ್ಣುಗಳನ್ನು ಹಾಳುಮಾಡುತ್ತದೆ.

ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಲಾಭ….!

ಮಾವು : ಇದನ್ನು ಫ್ರಿಜ್ ನಲ್ಲಿ ಇಡಬಾರದು. ಇದರಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಗಳು ಕಡಿಮೆಯಾಗುತ್ತವೆ. ಇದರಿಂದ ಹಣ್ಣು ಬೇಗನೆ ಹಾಳಾಗುತ್ತದೆ.

ಲಿಚಿ : ಲಿಚಿ ಹಣ್ಣಿಗೆ ಶಾಖ ಹೆಚ್ಚಾಗಿರಬೇಕು. ಹಾಗಾಗಿ ಇದನ್ನು ಫ್ರಿಜ್ ನಲ್ಲಿ ಇಡಬಾರದು. ಹಾಗೆ ಮಾಡುವುದರಿಂದ ಅದರ ಮೇಲಿನ ಭಾಗವು ಏನೂ ಆಗುವುದಿಲ್ಲ, ಆದರೆ ಒಳಗಿನ ತಿರುಳು ಹಾಳಾಗುತ್ತದೆ.

ದ್ರಾಕ್ಷಿ : ಫ್ರಿಜ್ ನಲ್ಲಿ ದ್ರಾಕ್ಷಿ ಹಣ್ಣು ಇಡುವುದರಿಂದ ಅದು ಬೇಗನೆ ಹಾಳಾಗುತ್ತದೆ. ಹಾಗಾಗಿ ಅದನ್ನು ಕವರ್ ಮಾಡಿ ಇಟ್ಟರೆ ದೀರ್ಘಕಾಲ ತಾಜಾವಾಗಿರುತ್ತದೆ.

ಆವಕಾಡೊ : ಆವಕಾಡೊನಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇರುತ್ತದೆ. ಹಾಗಾಗಿ ಇದನ್ನು ಫ್ರಿಜ್ ನಲ್ಲಿಟ್ಟಾಗ ಹಣ್ಣಿನ ಹೊರಭಾಗ ತುಂಬಾ ಗಟ್ಟಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...