ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಪುರಿ ಜಗನ್ನಾಥ ದೇಗುಲವು ಆಗಸ್ಟ್ 15ರಿಂದ ಸ್ಥಳೀಯರಿಗೆ ಹಾಗೂ ಆಗಸ್ಟ್ 23ರಿಂದ ಅನ್ಯ ಭಕ್ತಾದಿಗಳಿಗೆ ತೆರೆಯಲಿದೆ. ಭಕ್ತಾದಿಗಳಿಗೆ ಕೊರೊನಾ ಸೋಂಕು ತಗುಲದಂತೆ ದೇಗುಲದ ಆಡಳಿತ ಮಂಡಳಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ.
ಭಕ್ತಾದಿಗಳಿಗೆ ದೇಗುಲವು ಬೆಳಗ್ಗೆ 7ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲಿದೆ.
ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಆಡಳಿತ ಮಂಡಳಿ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಅಥವಾ ಕೊರೊನಾ 2 ಡೋಸ್ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. ಇನ್ನುಳಿದಂತೆ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವು ಕಡ್ಡಾಯವಾಗಿದೆ.
2 ಡೋಸ್ ಲಸಿಕೆ ಪಡೆದ ಭಕ್ತಾದಿಗಳು ಲಸಿಕೆ ಪ್ರಮಾಣ ಪತ್ರ ಹಾಗೂ ಒಂದು ಡೋಸ್ ಅಥವಾ ಲಸಿಕೆಯನ್ನೇ ಪಡೆಯದ ಭಕ್ತಾದಿಗಳು 96 ಗಂಟೆಯೊಳಗಿನ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರೋದು ಕಡ್ಡಾಯವಾಗಿದೆ.