ಇಬ್ಬರು ಮಕ್ಕಳ ತಾಯಿಗೆ ಜಿಮ್ ಮಾಲೀಕ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಗೆ ಬ್ಲಾಕ್ಮೇಲ್ ಮಾಡಿದ ಘಟನೆಯು ಪಂಜಾಬ್ನ ಲೂಧಿಯಾನದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ಆರೋಪಿಯನ್ನು ಹರಗೋವಿಂದಪುರ ನಿವಾಸಿ ಧರ್ಮೀಂದ್ರಕುಮಾರ್ ಸನ್ನಿ ಎಂದು ಗುರುತಿಸಲಾಗಿದೆ. ಈತ ಜಸ್ಸಿಯಾನ್ ರಸ್ತೆಯಲ್ಲಿ ಜಿಮ್ನ್ನು ಹೊಂದಿದ್ದ. 38 ವರ್ಷದ ಮಹಿಳೆಯು 2015ರಿಂದ ಸನ್ನಿ ಜಿಮ್ಗೆ ಸೇರಿಕೊಂಡಿದ್ದಳು. ಆದರೆ ಸನ್ನಿ ಈಕೆ ಹತ್ತಿರ ತನ್ನ ಬಳಿ ಇನ್ನೊಂದು ಜಿಮ್ ಇದ್ದು ಅದರಲ್ಲಿ ಇನ್ನಷ್ಟು ಪರಿಕರ ಇದೆ ಎಂದು ಹೇಳಿಕೊಂಡಿದ್ದ. ಹೀಗಾಗಿ ಆಕೆಗೆ ಮತ್ತೊಂದು ಜಿಮ್ನಲ್ಲಿ ತರಬೇತಿ ಆರಂಭವಾಗಿತ್ತು.
ದೂರುದಾರ ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ಒಂದು ದಿನ ಆ ಜಿಮ್ನಲ್ಲಿ ಆಕೆಯನ್ನು ಹೊರತುಪಡಿಸಿ ಮತ್ಯಾರೂ ಇರಲಿಲ್ಲ. ಟ್ರೇನರ್ ಕೂಡ ಆಗಿದ್ದ ಸನ್ನಿ ಆಕೆಗೆ ಕೆಲ ಮಾತ್ರೆ ಹಾಗೂ ಇಂಜೆಕ್ಷನ್ ನ್ನು ನೀಡಿದ. ಇದನ್ನು ಸ್ವೀಕರಿಸಿದಲ್ಲಿ ಒಳ್ಳೆಯ ಮೈಕಟ್ಟು ನಿಮ್ಮದಾಗಲಿದೆ ಎಂದು ಹೇಳಿದ್ದ. ಆದರೆ ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೇ ಆಕೆಯ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.