ಪಂಜಾಬಿನ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಚರಂಜಿತ್ ಸಿಂಗ್ ಚನ್ನಿ ಹೊಸ ಮುಖ್ಯಮಂತ್ರಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಚನ್ನಿಯು ಕಪುರ್ತಲಾದಲ್ಲಿರುವ ಐ ಕೆ ಗುಜ್ರಾಲ್ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಬಾಂಗ್ಡಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವ ವಿಡಿಯೋ ಸಕತ್ ವೈರಲ್ ಆಗಿದೆ. ಪಂಜಾಬಿನ ಹೊಸ ಸಿಎಂ ಹಳದಿ ಮುಂಡಾಸು ಧರಿಸಿ ಇತರರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಚನ್ನಾಗಿ ಮೂಡಿಬಂದಿದೆ.
ವಿಡಿಯೋ ನೋಡಿದ ನೆಟ್ಟಿಗರು ಹೊಸ ಮುಖ್ಯಮಂತ್ರಿಗೆ ಪ್ರಶಂಸೆ ಮಾಡಿದ್ದಾರೆ. ಮುಖ್ಯಮಂತ್ರಿ ಎಂದರೆ ಹೀಗಿರಬೇಕು, ಸೀದಾ ಸಾದಾ, ಸಿಂಗ್ ಇಸ್ ಕಿಂಗ್ ಹೀಗೆ ಅನೇಕ ರೀತಿಯಲ್ಲಿ ಹೊಗಳಿದ್ದಾರೆ. ಹಾಗೆಯೆ ಕೆಲವರು ಕೋವಿಡ್ ನಿರ್ಬಂಧ ಎಲ್ಲಿ ಹೋಯಿತೆಂದೂ ಕೂಡ ಅಣುಕಿಸಿದ್ದಾರೆ.
ಪ್ರತಿಭಟನಾ ವೇದಿಕೆಯೇ ಮದುವೆ ಮಂಟಪ – ಫೋಟೋ ಪ್ರದಕ್ಷಿಣೆಯೇ ಸಪ್ತಪದಿ: ರೈತರ ಧರಣಿ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿ ಎಂದು ಗುರುತಿಸಿಕೊಂಡಿರುವ ಚೆನ್ನಿ, ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ತಾನೊಬ್ಬ ಸಾಧಾರಣ ಮನುಷ್ಯ ಎಂದು ಹೇಳಿಕೊಂಡಿದ್ದಾರೆ. ತಾನು ಆಟೋ ಓಡಿಸುತ್ತಿದ್ದೆ ಎಂದು ಕೂಡ ಹೇಳಿಕೊಂಡಿದ್ದಾರೆ.
https://twitter.com/i/status/1440990261090209800