alex Certify ಇಡೀ ರಾಜ್ಯ ನಿಮ್ಮ ಜೊತೆಗಿದೆ ಎಂದು ಅಪ್ಪು ಕುಟುಂಬಕ್ಕೆ ಧೈರ್ಯ ಹೇಳಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡೀ ರಾಜ್ಯ ನಿಮ್ಮ ಜೊತೆಗಿದೆ ಎಂದು ಅಪ್ಪು ಕುಟುಂಬಕ್ಕೆ ಧೈರ್ಯ ಹೇಳಿದ ಸಿಎಂ

ಬೆಂಗಳೂರು: ಅಕ್ಕರೆಯ ಅಪ್ಪು ಅವರನ್ನು ಕಳೆದುಕೊಂಡು 8 ದಿನಗಳಾದವು. ಮುಂದೆ ಆಗಬೇಕಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ನಟ ಪುನೀತ್ ರಾಜಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಕುಟುಂಬದವರಿಗೆ ಸಾಂತ್ವನ ಹೇಳಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಟ ಪುನೀತ್ ರಾಜಕುಮಾರ್ ಕನ್ನಡ ಆಸ್ತಿಯಾಗಿದ್ದಾರೆ. ಸಾರ್ವಜನಿಕರು ಬಹುದೊಡ್ಡ ಸಂಖ್ಯೆಯಲ್ಲಿ ದರ್ಶನ ಪಡೆಯುತ್ತಿದ್ದಾರೆ. ಮುಂದಿನ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸುವ ಕುರಿತಂತೆ ಚರ್ಚೆ ನಡೆಸಲಾಗಿದೆ. ಕುಟುಂಬದವರು ನಡೆಸುವ ಎಲ್ಲ ಕಾರ್ಯಗಳ ಜೊತೆಗೆ ಸರ್ಕಾರ ಇರುತ್ತದೆ. ನಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಂತೆ ಆಗಿದೆ. ಹಾಗಾಗಿ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇವೆ. ಇಡೀ ರಾಜ್ಯ ನಿಮ್ಮ ಜೊತೆಗಿದೆ ಎಂದು ಅವರಿಗೆ ಧೈರ್ಯ ಹೇಳಿದ್ದೇವೆ ಎಂದರು.

ನವೆಂಬರ್ 16 ರಂದು ಫಿಲ್ಮ್ ಚೇಂಬರ್ ನಿಂದ ನಡೆಸುವ ಅಪ್ಪು ನಮನ ಕಾರ್ಯಕ್ರಮಕ್ಕೆ ಸರ್ಕಾರದ ಬೆಂಬಲ ಇರುತ್ತದೆ. ಮುಂದಿನ ದಿನಗಳಲ್ಲಿಯೂ ಪುನೀತ್ ರಾಜಕುಮಾರ್ ಗೆ ಸರ್ಕಾರ ಗೌರವ ಕೊಡಲಿದೆ. ಅಪ್ಪು ಮೇಲೆ ಜನರ ಪ್ರೀತಿ ಅನುಸಾರ ಸರ್ಕಾರ ಗೌರವಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...