alex Certify ಟೋಯಿಂಗ್‌​​​ ಆಗುತ್ತಿದ್ದ ಬೈಕ್​​ ಏರಿದ ಸವಾರ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಯಿಂಗ್‌​​​ ಆಗುತ್ತಿದ್ದ ಬೈಕ್​​ ಏರಿದ ಸವಾರ..! ವೈರಲ್​ ಆಯ್ತು ವಿಡಿಯೋ

ಬೈಕ್​ ಸವಾರನ ಸಮೇತ ಬೈಕ್​ನ್ನು ಟೋಯಿಂಗ್‌​ ಮಾಡಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪುಣೆಯಲ್ಲಿ ಈ ಘಟನೆ ನಡೆದಿದ್ದು ಪಾರ್ಕಿಂಗ್​ ಅಲ್ಲದ ಜಾಗದಲ್ಲಿ ನಿಂತಿದ್ದ ಬೈಕ್​ನ್ನು ಟೋಯಿಂಗ್‌​ ಮಾಡುತ್ತಿದ್ದಂತೆಯೇ ಓಡಿ ಬಂದ ಸವಾರ ಬೈಕ್​ ಏರಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ಪುಣೆಯ ನಾನಾಪೇಟ್​ ಏರಿಯಾದಲ್ಲಿ ಈ ಫನ್ನಿ ಘಟನೆ ಸಂಭವಿಸಿದೆ. ಸಂಚಾರಿ ಠಾಣೆ ಪೊಲೀಸರು ಟೋಯಿಂಗ್‌​ ವ್ಯಾನ್​ಗೆ ಜೋಡಿಸಲಾಗಿದ್ದ ಬೆಲ್ಟ್​​ನ ಸಹಾಯದಿಂದ ಬೈಕ್​ ಎತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿ ರಾಹುಲ್​​ ಶ್ರೀರಾಮೆ ಹೇಳಿದ್ದಾರೆ.

ಬೈಕ್​ ಸವಾರ ಬಂದು ಬೈಕ್​ ಏರೋದ್ರೋಳಗಾಗಿ ವಾಹನವನ್ನು ಸುಮಾರು ಮೇಲಕ್ಕೆ ಎತ್ತಲಾಗಿತ್ತು. ಪೊಲೀಸರ ಮನವಿ ಬಳಿಕವು ಬೈಕಿನಿಂದ ಇಳಿಯಲು ಸವಾರ ನಿರಾಕರಿಸಿದ್ದ. ಹೀಗಾಗಿ ಬೈಕ್​ ಸವಾರನ ಸಮೇತ ಬೈಕ್ ​ನ್ನು ಟೋಯಿಂಗ್‌​ ವ್ಯಾನ್​ನಲ್ಲಿ ಇರಿಸಲಾಗಿದೆ. ಬೈಕ್​ ಸವಾರ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ದಂಡವನ್ನೂ ಭರಿಸಿದ್ದಾನೆ.

— ANI (@ANI) August 20, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...