
ಪುಣೆಯಲ್ಲಿ ಈ ಘಟನೆ ನಡೆದಿದ್ದು ಪಾರ್ಕಿಂಗ್ ಅಲ್ಲದ ಜಾಗದಲ್ಲಿ ನಿಂತಿದ್ದ ಬೈಕ್ನ್ನು ಟೋಯಿಂಗ್ ಮಾಡುತ್ತಿದ್ದಂತೆಯೇ ಓಡಿ ಬಂದ ಸವಾರ ಬೈಕ್ ಏರಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪುಣೆಯ ನಾನಾಪೇಟ್ ಏರಿಯಾದಲ್ಲಿ ಈ ಫನ್ನಿ ಘಟನೆ ಸಂಭವಿಸಿದೆ. ಸಂಚಾರಿ ಠಾಣೆ ಪೊಲೀಸರು ಟೋಯಿಂಗ್ ವ್ಯಾನ್ಗೆ ಜೋಡಿಸಲಾಗಿದ್ದ ಬೆಲ್ಟ್ನ ಸಹಾಯದಿಂದ ಬೈಕ್ ಎತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಹುಲ್ ಶ್ರೀರಾಮೆ ಹೇಳಿದ್ದಾರೆ.
ಬೈಕ್ ಸವಾರ ಬಂದು ಬೈಕ್ ಏರೋದ್ರೋಳಗಾಗಿ ವಾಹನವನ್ನು ಸುಮಾರು ಮೇಲಕ್ಕೆ ಎತ್ತಲಾಗಿತ್ತು. ಪೊಲೀಸರ ಮನವಿ ಬಳಿಕವು ಬೈಕಿನಿಂದ ಇಳಿಯಲು ಸವಾರ ನಿರಾಕರಿಸಿದ್ದ. ಹೀಗಾಗಿ ಬೈಕ್ ಸವಾರನ ಸಮೇತ ಬೈಕ್ ನ್ನು ಟೋಯಿಂಗ್ ವ್ಯಾನ್ನಲ್ಲಿ ಇರಿಸಲಾಗಿದೆ. ಬೈಕ್ ಸವಾರ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ದಂಡವನ್ನೂ ಭರಿಸಿದ್ದಾನೆ.