alex Certify ಟಿಡಿ, ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಯಡಿ ವಂಚನೆ ಆರೋಪ: 6 ಮಂದಿ ಅಂಚೆ ನೌಕರರ ವಿರುದ್ಧ ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಡಿ, ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಯಡಿ ವಂಚನೆ ಆರೋಪ: 6 ಮಂದಿ ಅಂಚೆ ನೌಕರರ ವಿರುದ್ಧ ಪ್ರಕರಣ

ಪುಣೆ: ಟಿಡಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆಯಿಂದ 22 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ಅಂಚೆ ಇಲಾಖೆ 6ರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಗರದ ಡಂಕರ್ಕ್ ಲೈನ್ಸ್ ಉಪ ಅಂಚೆ ಕಚೇರಿ, ದಿಘಿ ಕ್ಯಾಂಪ್ ಉಪ ಅಂಚೆ ಕಚೇರಿ ಮತ್ತು ವಿಮಾನ ನಗರ ಉಪ ಅಂಚೆ ಕಚೇರಿಯ ನೌಕರರ ವಿರುದ್ಧ ಶುಕ್ರವಾರ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಜುಲೈ 2018 ಮತ್ತು ಆಗಸ್ಟ್ 2020 ರ ನಡುವೆ ಡಿಘಿ ಕ್ಯಾಂಪ್ ಉಪ ಅಂಚೆ ಕಚೇರಿಯಲ್ಲಿ ವಂಚನೆ ಸಂಭವಿಸಿದೆ. ಟಿಡಿ ಯೋಜನೆಯಲ್ಲಿ ಕನಿಷ್ಠ 274 ಜನರು 9.62 ಕೋಟಿ ರೂ. ತೊಡಗಿಸಿದ್ದು, ನಾಲ್ವರು ಅಧಿಕಾರಿಗಳು ಏಜೆಂಟರ ಕಮಿಷನ್ ಠೇವಣಿಯಿಂದ 18 ಲಕ್ಷ ರೂ.ವರೆಗೆ ಕಬಳಿಸಿ ತಮ್ಮ ತಮ್ಮಲ್ಲೇ ಹಂಚಿಕೊಂಡಿದ್ದಾರೆ.

ಅದೇ ರೀತಿ, ಟಿಡಿ ಯೋಜನೆಯಡಿ ಡಂಕಿರ್ಕ್ ಲೈನ್ ಉಪ ಅಂಚೆ ಕಚೇರಿಯಲ್ಲಿ 59 ಠೇವಣಿದಾರರಿಂದ 2.47 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 4.95 ಲಕ್ಷ ರೂ. ವಂಚಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಡಿ 45 ಸಾವಿರ ಹೂಡಿಕೆ ಮಾಡಿದ 19 ಮಂದಿಯ ದಾಖಲೆಯನ್ನು ಇಡಲು ವಿಫಲರಾದ ವಿಮಾನ ನಗರ ಉಪ ಅಂಚೆ ಕಚೇರಿಯ ಉಪ ಪೋಸ್ಟ್ ಮಾಸ್ಟರ್ ವಿರುದ್ಧ ಮೂರನೇ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಪರಾಧಗಳನ್ನು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳ ಪೈಕಿ ಸೆಕ್ಷನ್ 420(ವಂಚನೆ), 468(ನಕಲಿ), 408 (ಗುಮಾಸ್ತ ಅಥವಾ ಸೇವಕನಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...