alex Certify ಸೂರ್ಯನಿಗಿಂತ ಶಾಖಮಯವಾದ ನಕ್ಷತ್ರಗಳ ಅನ್ವೇಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯನಿಗಿಂತ ಶಾಖಮಯವಾದ ನಕ್ಷತ್ರಗಳ ಅನ್ವೇಷಣೆ

ಪುಣೆಯಲ್ಲಿರುವ ರಾಷ್ಟ್ರೀಯ ರೇಡಿಯೋ ಖಗೋಳಶಾಸ್ತ್ರ ಕೇಂದ್ರದ ಖಗೋಳಶಾಸ್ತ್ರಜ್ಞರು ಸೂರ್ಯನಿಗಿಂತ ಬಿಸಿ ಇರುವ ಅಪರೂಪದ ನಕ್ಷತ್ರಗಳನ್ನು ಶೋಧಿಸಿದ್ದಾರೆ. ಈ ನಕ್ಷತ್ರಗಳು “ಮೇನ್-ಸೀಕ್ವೆನ್ಸ್ ರೇಡಿಯೋ ಪಲ್ಸ್‌’ ಎಂಬ ವರ್ಗಕ್ಕೆ ಸೇರಿದ್ದಾಗಿವೆ.

ಇದುವರೆಗೂ ಬಾಹ್ಯಾಕಾಶದಲ್ಲಿ ಕೇವಲ 15 ರಷ್ಟು ಇಂಥ ನಕ್ಷತ್ರಗುಚ್ಛಗಳನ್ನು ಮಾತ್ರವೇ ಕಂಡು ಹಿಡಿಯಲಾಗಿದೆ. ಇವುಗಳ ಪೈಕಿ 11 ಅನ್ನು ಪುಣೆ ಮೂಲದ ಖಗೋಳಶಾಸ್ತ್ರಜ್ಞರೇ ಪತ್ತೆ ಮಾಡಿರುವುದು ವಿಶೇಷ. ಎಂಆರ್‌ಪಿಗಳು ಎಂದು ಕರೆಯಲಾಗುವ ಈ ನಕ್ಷತ್ರಗುಚ್ಛಗಳು ಅಪರೂಪದವು ಎಂದು ಇದುವರೆಗೂ ನಂಬಲಾಗಿತ್ತು.

ಗುಡ್ ನ್ಯೂಸ್: ರೈತರಿಗೆ ಸ್ಮಾರ್ಟ್ಫೋನ್ ಖರೀದಿಗೆ ಹಣ ನೀಡಲು ನಿರ್ಧಾರ, ಅನ್ನದಾತರಿಗೆ ಗುಜರಾತ್ ಸರ್ಕಾರದ ಕೊಡುಗೆ

ಜೈಂಟ್ ಮೀಟರ್‌ವೇಚ್‌ ರೇಡಿಯೋ ಪಲ್ಸ್‌ ಎಂಬ ಸೂಕ್ಷ್ಮ ಸಾಧನದಿಂದ ಈ ನಕ್ಷತ್ರಗುಚ್ಛಗಳ ಸಂಶೋಧನೆ ಸಾಧ್ಯವಾಗಿದೆ. ಇಂಥ ಮೊದಲ ಎಂಆರ್‌ಪಿಯನ್ನು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಅನ್ವೇಷಿಸಲಾಗಿದೆ. ಈ ಸೂಕ್ಷ್ಮದರ್ಶಕವು ಬಹಳ ನಾಜೂಕಿನದ್ದಾಗಿದ್ದು ಭಾರೀ ಸ್ಪಷ್ಟ ಚಿತ್ರಗಳನ್ನು ಮೂಡಿಸುವ ಕ್ಷಮತೆ ಹೊಂದಿದೆ. ಈ ಯೋಜನೆಯ ಅನ್ವೇಷಣೆಗಳ ವಿವರಗಳನ್ನು ’ಆಸ್ಟ್ರೋಫಿಸಿಕಲ್ ಜರ್ನಲ್‌’ನಲ್ಲಿ ಪ್ರಕಟಿಸಲಾಗಿದೆ.

ಈ ನಕ್ಷತ್ರಗಳು ಸೂರ್ಯನಿಗಿಂತ ಹೆಚ್ಚಿನ ಶಾಖ ಹೊಂದಿರುವುದಲ್ಲದೇ ಭಾರೀ ಪ್ರಮಾಣದಲ್ಲಿ ಆಯಸ್ಕಾಂತೀಯ ಆಕರ್ಷಣೆಯನ್ನು ಬಿಡುಗಡೆ ಮಾಡುತ್ತವೆ. ಇವುಗಳು ನಕ್ಷತ್ರಗಳಲ್ಲಿರುವ ಭಾರೀ ಮಾರುತಗಳಿಗಿಂತಲೂ ಬಲಶಾಲಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...