alex Certify ನಿಜ ಜೀವನದಲ್ಲೂ ಇದ್ದಾನೆ ಇಂತಹ ವ್ಯಕ್ತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜ ಜೀವನದಲ್ಲೂ ಇದ್ದಾನೆ ಇಂತಹ ವ್ಯಕ್ತಿ…..!

ಒಂದು ವೇಳೆ ನೀವು ‘ಮಾರ್ವೆಲ್’ ಚಲನಚಿತ್ರ ವೀಕ್ಷಿಸಿದ್ದರೆ, ಅದರಲ್ಲಿ ಬರುವ ಭಯಾನಕ ವ್ಯಕ್ತಿಯ (ಧಡೂತಿ) ಪಾತ್ರವು ಅಪಾರ ಶಕ್ತಿಯನ್ನು ಹೊಂದಿದೆ. ಆದರೆ, ನಿಜ ಜೀವನದಲ್ಲಿ ಈ ತರಹದ ಮನುಷ್ಯರು ಇರುವುದು ಅಸಾಧ್ಯ ಅಂತಾನೇ ಹೇಳಬಹುದು. ಆದರೆ. ನೆಟ್ಟಿಗರು ಮಾತ್ರ ನಿಜ ಜೀವನದ ಹಲ್ಕ್ (ಧಡೂತಿ ವ್ಯಕ್ತಿ) ಅನ್ನು ಕಂಡುಹಿಡಿದಿದ್ದಾರೆ.

ಹೌದು, ಇರಾನಿನ ದೇಹದಾರ್ಢ್ಯಪಟು ಸಜದ್ ಘರಿಬಿ ಅವರು ಮಾರ್ವೆಲ್ ಸಿನಿಮಾದ ಕಾಲ್ಪನಿಕ ಪಾತ್ರದ ನೈಜ-ಜೀವನದ ಪ್ರತಿರೂಪದಂತೆ ಕಾಣುತ್ತಾರೆ. ಅವರ ನಡವಳಿಕೆಯು ಅವರ ವಯಸ್ಸಿನ ಇತರ ಬಾಡಿ ಬಿಲ್ಡರ್‌ಗಳಿಗಿಂತ ಪ್ರತ್ಯೇಕವಾಗಿ ಕಾಣುತ್ತಾರೆ. 29 ವರ್ಷದ ಸಜಾದ್ ವೃತ್ತಿಪರ ಎಂಎಂಎ ಫೈಟರ್ ಆಗಿದ್ದು, ಅವರು 2019 ರಲ್ಲಿ ಈ ವೃತ್ತಿಗೆ ಕಾಲಿಟ್ಟಿದ್ದಾರೆ. ಸದ್ಯ, ಸಜಾದ್ ತನ್ನ ಮುಂದಿನ ಫೈಟ್‍ನಲ್ಲಿ ಮಾರ್ಟಿನ್ ಫೋರ್ಡ್ ಅವರನ್ನು ಎದುರಿಸಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಈಗಾಗಲೇ ಇಂಟರ್ನೆಟ್ ನಲ್ಲಿ ಸೆನ್ಸೇಷನ್‌ ಸೃಷ್ಟಿಸಿರುವ ಪಂದ್ಯವನ್ನು ವಿಶ್ವದ ಭಯಾನಕ ಪುರುಷರ ನಡುವೆ ನಡೆಸಲಾಗುತ್ತಿದೆ. ಬಿಗ್ ಫೈಟ್ 2022ರ ಏಪ್ರಿಲ್ 2 ರಂದು ಲಂಡನ್‌ನಲ್ಲಿ ನಡೆಯಲಿದ್ದು, ಅದಕ್ಕಾಗಿ ಇನ್ನೂ ಕೂಡ ಸಮಯವಿದೆ. ಆದರೆ, ಸಜಾದ್ ಮಾತ್ರ ವಿಶ್ರಾಂತಿ ಪಡೆಯುವ ಮನಃಸ್ಥಿತಿಯಲ್ಲಿಲ್ಲ.

ಈ ಬಾಡಿಬಿಲ್ಡರ್ ಇತ್ತೀಚೆಗೆ ತನ್ನ ತಯಾರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಕಾಂಕ್ರೀಟ್ ಗೋಡೆಗಳನ್ನು ಗುದ್ದುವುದು, ಕಾರುಗಳನ್ನು ಎಳೆಯುವುದು, ಲೋಹಗಳನ್ನು ಬಗ್ಗಿಸುವುದು ಮತ್ತು ಕಲ್ಲಂಗಡಿಗಳನ್ನು ಸೀಳುವುದು ಮುಂತಾದವುಗಳನ್ನು ನಿರಾಯಾಸವಾಗಿ ಮಾಡಿರುವುದನ್ನು ಕಂಡು ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಸಜಾದ್ ಅವರು ತಮ್ಮ ದೇಹದಾರ್ಢ್ಯವನ್ನು ತೋರಿಸಲು ವಿಡಿಯೋ ಮಾಡಿದಂತೆ ಕಂಡು ಬಂದಿಲ್ಲ. ಬದಲಾಗಿ ಇದು ಎದುರಾಳಿಗೆ ಎಚ್ಚರಿಕೆಯ ಕರೆಗಂಟೆಯಂತಿದೆ.

ಅಂದಹಾಗೆ ಸಜಾದ್ ಅವರ ಎಚ್ಚರಿಕೆಯು ಅವರ ಎದುರಾಳಿ ಫೋರ್ಡ್‌ ಪಿತ್ತ ನೆತ್ತಿಗೇರಿದಂತಿದೆ. ಅವರು ಪ್ರಬಲ ಪ್ರತಿಕ್ರಿಯೆಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಮಾರ್ಟಿನ್ ಫೋರ್ಡ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...