alex Certify ಕುಡಿದ ಮತ್ತಿನಲ್ಲಿ ಅರೆ ಬೆತ್ತಲಾದ ಮಹಿಳೆ; ಹಾರುತ್ತಿದ್ದ ವಿಮಾನದಲ್ಲೇ ದಾಂಧಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ ಅರೆ ಬೆತ್ತಲಾದ ಮಹಿಳೆ; ಹಾರುತ್ತಿದ್ದ ವಿಮಾನದಲ್ಲೇ ದಾಂಧಲೆ….!

ಅಬುದಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಟಾಲಿಯನ್ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ವಿಮಾನ ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಬಟ್ಟೆ ಹರಿದುಕೊಂಡು ಅರೆ ಬೆತ್ತಲಾಗಿದ್ದಾಳೆ. ಇದೀಗ ಆಕೆಯನ್ನು ವಶಕ್ಕೆ ಪಡೆದಿರುವ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ: Paola Perruccio ಎಂಬ ಹೆಸರಿನ 45 ವರ್ಷದ ಈ ಮಹಿಳೆ ಅಬುದಾಬಿಯಿಂದ ಮುಂಬೈಗೆ ಆಗಮಿಸುತ್ತಿದ್ದು, ಎಕಾನಮಿ ಕ್ಲಾಸ್ ಸೀಟಿನಲ್ಲಿ ಕುಳಿತಿದ್ದಳು. ಬಳಿಕ ಏಕಾಏಕಿ ಬಿಸಿನೆಸ್ ಕ್ಲಾಸ್ ಕ್ಯಾಬಿನ್ ಗೆ ತೆರಳಿ ಅಲ್ಲಿ ಕುಳಿತಿದ್ದಾಳೆ. ಈ ಸಂದರ್ಭದಲ್ಲಿ ವಿಮಾನ ಸಿಬ್ಬಂದಿ ಆಕೆಯನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ ನಿಮಗೆ ನಿಗದಿಪಡಿಸಿರುವ ಎಕಾನಮಿ ಕ್ಲಾಸ್ ಸೀಟಿನಲ್ಲಿ ಕುಳಿತುಕೊಳ್ಳಿ ಎಂದು ವಿನಂತಿಸಿದ್ದು, ಅಷ್ಟಕ್ಕೆ ಕೋಪಗೊಂಡ ಮಹಿಳೆ ಸಿಬ್ಬಂದಿ ಮುಖಕ್ಕೆ ಹೊಡೆದಿದ್ದಾಳೆ. ನೆರವಿಗೆ ಬಂದ ಇತರೆ ಸಿಬ್ಬಂದಿ ಮೇಲೆ ಉಗುಳಿದ್ದು ಅಲ್ಲದೆ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಅರೆ ಬೆತ್ತಲಾಗಿ ರಂಪಾಟ ನಡೆಸಿದ್ದಾಳೆ.

ಇಂದು ಬೆಳಗಿನ ಜಾವ ವಿಮಾನ ಮುಂಬೈಗೆ ಬಂದಿಳಿಯುತ್ತಲೇ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಬಂಧಿಸಿರುವ ಪೊಲೀಸರು ಮಹಿಳೆಯ ಪಾಸ್ಪೋರ್ಟ್ ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...