ಜರ್ಮನ್ ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಪೂಮಾ ಜನಪ್ರಿಯ ಭಾರತೀಯ ಗಾಯಕ ಹಾರ್ಡಿ ಸಂಧು ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ.
ಪೂಮಾ ಬ್ರಾಂಡ್ ಅನ್ನು ಪ್ರಮೋಟ್ ಮಾಡುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಕರೀನಾ ಕಪೂರ್, ಯುವರಾಜ್ ಸಿಂಗ್, ಎಂಸಿ ಮೇರಿ ಕೋಮ್, ಅವನಿ ಲೆಖರಾ ಮತ್ತು ದ್ಯುತಿ ಚಂದ್ ಇದ್ದು, ಇದೀಗ ಸಂಧು ಹೊಸ ಸೇರ್ಪಡೆಯಾಗಿದೆ.
ಮಾಜಿ ಕ್ರಿಕೆಟಿಗ, ನಟ ಮತ್ತು ಪಾಪ್-ಸ್ಟಾರ್ನ ಸೇರ್ಪಡೆಯು ಬ್ರ್ಯಾಂಡ್ ನ ಭೌಗೋಳಿಕ ಪ್ರಸ್ತುತತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ತನ್ನ ಮಾರುಕಟ್ಟೆ ನಾಯಕತ್ವದ ಸ್ಥಾನವನ್ನು ಕಾಪಾಡಿಕೊಳ್ಳಲು ಈ ಒಡಂಬಡಿಕೆ ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಅವರು ಬ್ರ್ಯಾಂಡ್ ಪಾದರಕ್ಷೆಗಳು, ಉಡುಪುಗಳು ಮತ್ತು ಆಯ್ದ ಸಂಗ್ರಹಗಳನ್ನು ಒಳಗೊಂಡಂತೆ ಪರಿಕರಗಳನ್ನು ಪ್ರಮೋಟ್ ಮಾಡಲಿದ್ದಾರೆ.
ಬಿಜ್ಲಿ ಬಿಜ್ಲಿ, ಕ್ಯಾ ಬಾತ್ ಆಯೇ ಮುಂತಾದ ಹಾಡುಗಳ ಮೂಲಕ ಸಂಧು ಖ್ಯಾತಿಯಾಗಿದ್ದಾರೆ. ಸಂಧು 2004ರಲ್ಲಿ ವೇಗದ ಬೌಲರ್ ಆಗಿ ಭಾರತದ ಯು19 ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಸದಸ್ಯರಾಗಿದ್ದರು.