alex Certify ಉದ್ಯೋಗ ಸೃಷ್ಟಿ ಕುರಿತು ಸರ್ಕಾರದ ಹಿರಿಯ ಅಧಿಕಾರಿಯಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಸೃಷ್ಟಿ ಕುರಿತು ಸರ್ಕಾರದ ಹಿರಿಯ ಅಧಿಕಾರಿಯಿಂದ ಮಹತ್ವದ ಮಾಹಿತಿ

ಪ್ರಸಕ್ತ ಟೆಲಿಕಾಂ ನೀತಿ ಅಡಿ ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಕೋಟಿಯಷ್ಟು ಹಾಟ್‌ಸ್ಪಾಟ್‌ಗಳ ಅಳವಡಿಕೆ ಅಭಿಯಾನದಿಂದ ಮುಂಬರುವ ದಿನಗಳಲ್ಲಿ 2-3 ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ರಾಡ್‌ಬ್ಯಾಂಡ್ ಇಂಡಿಯಾ ಫೋರಂ (ಬಿಐಎಫ್‌) ಸಭೆಯೊಂದರಲ್ಲಿ ಮಾತನಾಡುವ ವೇಳೆ, ಟೆಲಿಕಾಂ ಕಾರ್ಯದರ್ಶಿ ಕೆ. ರಾಜರಾಮನ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವೈ-ಫೈ ಅಕ್ಸೆಸ್ ಜಾಲತಾಣ ಇಂಟರ್ಫೇಸ್ (ಪಿಎಂ-ವಾನಿ) ಅಭಿಯಾನಕ್ಕೆ ಪೂರಕವಾಗಿ ದೇಶಾದ್ಯಂತ ವೈಫೈ ಹಾಟ್‌ಸ್ಪಾಟ್‌ಗಳ ಅಳವಡಿಕೆಗೆ ನೆರವಾಗಲು ವೈಫೈ ಉಪಕರಣಗಳ ಬೆಲೆಗಳಲ್ಲಿ ಇಳಿಕೆ ಮಾಡುವಂತೆ ಉತ್ಪಾದಕರನ್ನು ಕೋರಿಕೊಂಡಿದ್ದಾರೆ.

ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ

“ಪ್ರತಿಯೊಂದು ಹಾಟ್‌ಸ್ಪಾಟ್‌ 2-3 ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದು ಆರಂಭಿಕ ಅಂದಾಜು ಮಾಡಲಾಗಿದ್ದು, ರಾಷ್ಟ್ರೀಯ ಡಿಜಿಟಲ್ ಸಂಪರ್ಕ ನೀತಿ (ಎನ್‌ಡಿಸಿಪಿ) ಅಡಿ 2022ರಲ್ಲಿ ಒಂದು ಕೋಟಿ ಹಾಟ್‌ಸ್ಪಾಟ್‌ಗಳ ಅಳವಡಿಕೆಯಿಂದ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಕ್ಷೇತ್ರದಲ್ಲಿ 20-30 ದಶಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ,” ಎಂದು ರಾಜಾರಾಮನ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...