alex Certify ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ

ನಿಮ್ಮ ಆಧಾರ್‌ ಕಾರ್ಡ್ಅನ್ನು ಸಾಕ್ಷಿಯಾಗಿ ಇಟ್ಟುಕೊಂಡು ಎಷ್ಟು ಸಿಮ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂಬುದು ಬಹಳಷ್ಟು ಬಾರಿ ನಮಗೆ ಗೊತ್ತೇ ಆಗಿರುವುದಿಲ್ಲ.

ಟೆಲಿಸಂಪರ್ಕದ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವೀಗ ಈ ಮಾಹಿತಿಯನ್ನು ಕಂಡುಕೊಳ್ಳಬಹುದಾಗಿದೆ. ಇದೇ ವೇಳೆ, ಚಾಲ್ತಿಯಲ್ಲಿರದ ಸಿಮ್‌ಅನ್ನು ಆಫ್ ಮಾಡಲು ಸಹ ನೀವು ವಿನಂತಿಸಿಕೊಳ್ಳಬಹುದಾಗಿದೆ. ವಂಚನೆ ನಿರ್ವಹಣೆ ಮತ್ತು ಗ್ರಾಹಕ ರಕ್ಷಣೆಗಾಗಿ ಟೆಲಿಕಾಂ ಅನಾಲಿಟಿಕ್ಸ್‌ (ಟ್ಯಾಫ್‌ಕಾಪ್) ಈ ಸೇವೆಯ ಹೆಸರು.

ಬೆಚ್ಚಿಬೀಳಿಸುತ್ತೆ ಕಾಯಿಲೆ ಗುಣಪಡಿಸಲು ಈ ಚೈನೀಸ್ ಥೆರಪಿ ಅಳವಡಿಸುವ ವಿಧಾನ…!

ಸದ್ಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರವೇ ಈ ಸೇವೆ ಲಭ್ಯವಿದ್ದು, ಶೀಘ್ರದಲ್ಲೇ ದೇಶಾದ್ಯಂತ ದೊರಕುವಂತೆ ಮಾಡಲಾಗುವುದು.

https://tafcop.dgtelecom.gov.in ಲಿಂಕ್‌ಗೆ ಭೇಟಿ ನೀಡಿ, ನಿಮ್ಮ ಮೊಬೈಲ್ ಸಂಖ್ಯೆಗೆ 6-ಅಂಕಿಯ ಓಟಿಪಿ ಸ್ವೀಕರಿಸುವ ಮೂಲಕ, ನಿಮ್ಮ ಸಂಖ್ಯೆಯನ್ನು ಖಾತ್ರಿ ಪಡಿಸಿಕೊಂಡು, ನಿಮ್ಮ ಆಧಾರ್‌ ಸಂಖ್ಯೆಯೊಂದಿಗೆ ಪಟ್ಟಿಯಲ್ಲಿರುವ ಮೊಬೈಲ್ ಸಂಖ್ಯೆಗಳನ್ನು ತಿಳಿಯಬಹುದಾಗಿದೆ. ಇವುಗಳ ಪೈಕಿ ಯಾವುದಾದರೂ ಸಿಮ್ ನಿಮ್ಮದಲ್ಲದೇ ಇದ್ದಲ್ಲಿ, ಆ ಸಂಖ್ಯೆಯ ಬಳಿ ಟಿಕ್ ಮಾಡುವ ಮೂಲಕ ಅದನ್ನು ನಿಷ್ಕ್ರಿಯಗೊಳಿಸಲು ವಿನಂತಿ ಮುಂದಿಡಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...